ಬಳ್ಳಾರಿ: ಕೊರೊನಾ ಸೋಂಕಿನಿಂದ ಗುಣಮುಖರಾದ ಮೂವರನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಸ್ಪತ್ರೆ ಅಧಿಕಾರಿಗಳು ಚಪ್ಪಾಳೆ ತಟ್ಟುವ ಮುಖೇನ ಬೀಳ್ಕೊಟ್ಟರು.
ಗಣಿನಾಡಿನ ಮೂವರು ಸೋಂಕಿತರು ಗುಣಮುಖ: ಚಪ್ಪಾಳೆ ತಟ್ಟಿ ಡಿಸ್ಚಾರ್ಜ್ - ಕೊರೊನಾ ವೈರಸ್
ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದ ಒಂದೇ ಕುಟುಂಬದ ಮೂವರು ಗುಣಮುಖರಾದ ಹಿನ್ನೆಲೆ ಬಳ್ಳಾರಿ ಜಿಲ್ಲಾ ಸರ್ಕಾರಿ ವೈದ್ಯರ ತಂಡ ಮೂವರನ್ನು ಆತ್ಮೀಯವಾಗಿ ಬಿಳ್ಕೋಟ್ಟರು.
ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಕೋವಿಡ್-19 ನಿಂದ ಹೊರಬಂದ ಪಿ-89, ಪಿ-91 ಹಾಗೂ ಪಿ-141 ಮತ್ತು ಅವರನ್ನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಹೆಚ್. ಎಲ್. ಜನಾರ್ದನ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್. ಬಸರೆಡ್ಡಿ, ವಿಮ್ಸ್ ನಿರ್ದೇಶಕ ಡಾ. ಬಿ. ದೇವಾನಂದ, ಡಾ. ಎಸ್. ಕೆ. ಅರುಣಕುಮಾರ, ಡಾ. ಬಿ. ಕೆ. ಸುಂದರ ಅವರ ನೇತೃತ್ವದ ವೈದ್ಯರ ತಂಡ ಗುಲಾಬಿ ಹೂ, ದಿನಸಿ ಹಾಗೂ ಸಸಿ ನೀಡುವ ಮೂಲಕ ಮೂವರನ್ನ ಆತ್ಮೀಯವಾಗಿ ಬೀಳ್ಕೊಟ್ಟರು.
ಒಂದೇ ಕುಟುಂಬದ ಮೂವರಿಗೆ ಬೆಂಗಳೂರಿನ ದುಬೈ ಮೂಲದ ವ್ಯಕ್ತಿಯನ್ನ ಸಂಪರ್ಕಿಸಿದಾಗ ಸೋಂಕು ಕಾಣಿಸಿಕೊಂಡಿತ್ತು. ಸದ್ಯ ಗುಣಮುಖರಾದ ಹಿನ್ನೆಲೆ ಮೂವರನ್ನ ಬೀಳ್ಕೊಡಲಾಯಿತು.