ವಿಜಯನಗರ:ಹೂವಿನಹಡಗಲಿ ಎಸ್‌ಬಿಐ ಶಾಖೆ ಎದುರಿನ ಮುಖ್ಯ ರಸ್ತೆಯಲ್ಲಿ 2.79 ಲಕ್ಷ ರೂ. ಹಣವಿದ್ದ ಬ್ಯಾಗ್ ಅನ್ನು ಕಳ್ಳರು ಅಪಹರಿಸಿ ಪರಾರಿಯಾಗಿರುವ ಘಟನೆ ಗುರುವಾರ ಸಂಜೆ ಜರುಗಿದೆ.
ವಿಜಯನಗರ: 2.79 ಲಕ್ಷ ರೂ. ಹಣವಿದ್ದ ಬ್ಯಾಗ್ ಎಗರಿಸಿದ ಖದೀಮರು - ಹಣವಿದ್ದ ಬ್ಯಾಗ್ ಎಗರಿಸಿದ ಖದೀಮರು
ರಸ್ತೆ ಬದಿಯಲ್ಲಿದ್ದ ಬೇಕರಿಯಲ್ಲಿ ಸಿಹಿ ತರಲು ಹೋಗಿದ್ದಾಗ ಕಳ್ಳರು ಬೈಕ್‌ಲ್ಲಿದ್ದ ಹಣದ ಬ್ಯಾಗ್ ಅಪಹರಿಸಿಕೊಂಡು ಹೋಗಿದ್ದಾರೆ.
ಪಟ್ಟಣದ ಎಸ್‌ಬಿಐ ಶಾಖೆಯಲ್ಲಿ ಹಣ ಬಿಡಿಸಿದ ರೈತ ವೀರನಗೌಡ ಎಂಬುವವರು ತಮ್ಮ ಮೋಟಾರ್ ಬೈಕ್‌ನ ಸೈಡ್ ಬ್ಯಾಗ್ನಲ್ಲಿ ಇರಿಸಿಕೊಂಡು ಮುಖ್ಯ ರಸ್ತೆಯ ಬಿಡಿಸಿಸಿ ಬ್ಯಾಂಕ್ ಎದುರಿಗಿರುವ ಹಣ್ಣಿನ ಅಂಗಡಿ ಬಳಿ ಬೈಕ್ ನಿಲ್ಲಿಸಿದ್ದರು. ರಸ್ತೆ ಬದಿಯಲ್ಲಿದ್ದ ಬೇಕರಿಯಲ್ಲಿ ಸಿಹಿ ತರಲು ಹೋಗಿದ್ದಾಗ ಕಳ್ಳರು ಬೈಕ್‌ಲ್ಲಿದ್ದ ಹಣದ ಬ್ಯಾಗ್ ಅಪಹರಿಸಿಕೊಂಡು ಹೋಗಿದ್ದಾರೆ ಎನ್ನಲಾಗ್ತಿದೆ.
ಬ್ಯಾಂಕ್‌ನಲ್ಲಿ ದೊಡ್ಡ ಮೊತ್ತದ ಹಣ ಬಿಡಿಸಿದ್ದನ್ನು ಗಮನಿಸಿರುವ ಕಳ್ಳರು ಗ್ರಾಹಕರನ್ನು ಬೈಕ್‌ನಲ್ಲೇ ಹಿಂಬಾಲಿಸಿಕೊಂಡು ಬಂದು ಹಣ ದೋಚಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಕುರಿತು ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.