ಬಳ್ಳಾರಿ:ಭೂಗತ ಪಾತಕಿ ಬಚ್ಚಾಖಾನ್ ತನ್ನ ಪ್ರೇಯಸಿಯೊಂದಿಗೆ ಧಾರವಾಡದ ಲಾಡ್ಜ್ನಲ್ಲಿ ಇರಲು ಪೊಲೀಸರೇ ಅವಕಾಶ ಮಾಡಿಕೊಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ನಿರ್ಲಕ್ಷ್ಯ ತೋರಿದ ಬಳ್ಳಾರಿಯ ನಾಲ್ಕು ಜನ ಪೊಲೀಸರನ್ನು ಅಮಾನತು ಮಾಡಿ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಆದೇಶ ಹೊರಡಿಸಿದ್ದಾರೆ.
ಬಳ್ಳಾರಿಯ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿಯಾದ ಯೋಗೇಶಾಚಾರಿ, ಎಸ್. ಶಶಿಕುಮಾರ್, ರವಿಕುಮಾರ್ ಮತ್ತು ಸಂಗಮೇಶ್ ಕಾಳಗಿ ಅವರನ್ನು ಅಮಾನತು ಮಾಡಲಾಗಿದೆ.