ಕರ್ನಾಟಕ

karnataka

ETV Bharat / city

ಬಳ್ಳಾರಿಯಲ್ಲಿ ಧಾರಾಕಾರ ಮಳೆ: ರೈತರ ಬೆಳೆಗಳು ಸಂಪೂರ್ಣ ಜಲಾವೃತ - ರೈತರ ತೋಟಗಳು ಜಲಾವೃತ

ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ನಿನ್ನೆ ತಡರಾತ್ರಿ ಸುರಿದ ಭಾರಿ ಮಳೆಗೆ ಹಲವು ಗ್ರಾಮಗಳಲ್ಲಿ ಬೆಳೆಗಳು ಜಲಾವೃತಗೊಂಡಿವೆ.

Aquatic crop
ಜಲಾವೃತಗೊಂಡಿರುವ ಬೆಳೆ

By

Published : Jul 25, 2020, 2:11 PM IST

ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ನಿನ್ನೆ ತಡರಾತ್ರಿ ಸುರಿದ ಭಾರಿ ಮಳೆಗೆ ಹಲವು ಗ್ರಾಮಗಳಲ್ಲಿ ರೈತರ ಬೆಳೆಗಳು ಜಲಾವೃತಗೊಂಡಿವೆ.

ತಾಲೂಕಿನ ವಟ್ಟಮ್ಮನಹಳ್ಳಿಯ ಗ್ರಾಮದ ರಾಮಪ್ಪ, ಹೆಚ್.ಜಾತಪ್ಪ ಸೇರಿದಂತೆ ಹಲವು ರೈತರಿಗೆ ಸೇರಿದ್ದ ತೋಟಗಳಿಗೆ ನೀರು ನುಗ್ಗಿದೆ. ಪರಿಣಾಮ ಫಸಲಿಗೆ ಬಂದಿದ್ದ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿವೆ.

ಬೆಳೆಯಲ್ಲಿ ತುಂಬಿರುವ ನೀರು

ಗ್ರಾಮ ಹೊರವಲಯದಲ್ಲಿ ಹತ್ತಾರು ಎಕರೆ ಜಮೀನಿನನಲ್ಲಿ ಬೆಳೆದ ತುಪ್ಪದ ಹೀರೆಕಾಯಿ, ಹಗಲಕಾಯಿ, ಸೌತೆಕಾಯಿ, ಮಲ್ಲಿಗೆ ಮಗ್ಗಿ, ಮೆಣಸಿನ ಬೆಳೆಗಳೆಲ್ಲ ಮಳೆಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ಪ್ರತಿ ವರ್ಷವೂ ಇದೇ ರೀತಿ ಬೆಳೆದ ಬೆಳೆಗಳು ಕೈಗೆಟುಕುತ್ತಿಲ್ಲ ಎಂದು ರೈತರು ದೂರಿದರು.

ಜಲಾವೃತಗೊಂಡಿರುವ ಬೆಳೆ

ABOUT THE AUTHOR

...view details