ಬಳ್ಳಾರಿ : ನ್ಯಾ. ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಲು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಚಳವಳಿಗೆ ಚಾಲನೆಯನ್ನ ನಗರದ ಕಂಟೋನ್ಮೆಂಟ್ ಪ್ರದೇಶ ಅಂಚೆ ಇಲಾಖೆ ಆವರಣದಲ್ಲಿ ಇಂದು ನೀಡಲಾಯಿತು.
ಸದಾಶಿವ ಆಯೋಗ ವರದಿ ಅನುಷ್ಠಾನ, ಪತ್ರ ಚಳವಳಿ ಮುಖಾಂತರ ಮೋಹನ್ ಭಾಗವತ್‌ರಿಗೆ ಮನವಿ - ಪತ್ರ ಚಳುವಳಿ ಮುಖಾಂತರ ಮೋಹನ್ ಭಾಗವತ್ ಗೆ ಮನವಿ
ಭಾರತೀಯ ಜನತಾ ಪಕ್ಷವು ರಾಜ್ಯದಲ್ಲಿ ಶೇ.37ರಷ್ಟು ಮತ ಪಡೆದುಕೊಂಡು ಆಡಳಿತ ಮಾಡುತ್ತಿದೆ. ಆಡಳಿತ ನಡೆಸುವ ಪಕ್ಷಗಳಿಗೆ ಸಾಮಾಜಿಕ ನ್ಯಾಯ ನೀಡುವ ಬದ್ಧತೆ ಇರಬೇಕು..

ಸದಾಶಿವ ಆಯೋಗ ಅನುಷ್ಠಾನ ಜಾರಿ, ಪತ್ರ ಚಳುವಳಿ ಮುಖಾಂತರ ಮೋಹನ್ ಭಾಗವತ್ ಗೆ ಮನವಿ
ಸದಾಶಿವ ಆಯೋಗ ವರದಿ ಅನುಷ್ಠಾನ, ಪತ್ರ ಚಳವಳಿ ಮುಖಾಂತರ ಮೋಹನ್ ಭಾಗವತ್‌ರಿಗೆ ಮನವಿ
ಈ ವೇಳೆ ಸದಾಶಿವ ಆಯೋಗದ ವರದಿ ಅನುಷ್ಠಾನ ಸಮಿತಿಯ ಹಿರಿಯ ಮುಖಂಡ ಜಯಗೋಪಾಲ್ ಅವರು ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಲೋಕಸಭೆ, ರಾಜ್ಯಸಭೆ ಹಾಗೂ ಸ್ಥಳೀಯ ಚುನಾವಣೆಗೆ ಬೆಂಬಲವನ್ನು ನೀಡಿದ್ದೇವೆ. ಹಾಗೇ ಭಾರತೀಯ ಜನತಾ ಪಕ್ಷವು ರಾಜ್ಯದಲ್ಲಿ ಶೇ.37ರಷ್ಟು ಮತ ಪಡೆದುಕೊಂಡು ಆಡಳಿತ ಮಾಡುತ್ತಿದೆ. ಆಡಳಿತ ನಡೆಸುವ ಪಕ್ಷಗಳಿಗೆ ಸಾಮಾಜಿಕ ನ್ಯಾಯ ನೀಡುವ ಬದ್ಧತೆ ಇರಬೇಕು ಎಂದರು.
ಸಮಾಜದಲ್ಲಿ ಶೋಷಣೆಗೆ ಒಳಗಾದವರನ್ನು ಹೊರತರುವ ಪ್ರಯತ್ನವನ್ನು ಮಾಡಬೇಕು ಎಂದು ಕೇಳಿಕೊಂಡರು. ಈ ಸಮಯದಲ್ಲಿ ಸಿದ್ಧಾರ್ಥ ನಗರದ ಯುವಕರ ಬಳಗ ಹತ್ತಾರು ಸದಸ್ಯರು ಈ ಪತ್ರ ಚಳವಳಿಯಲ್ಲಿ ಭಾಗವಹಿಸಿದರು.
Last Updated : Aug 9, 2020, 7:12 PM IST