ಬಳ್ಳಾರಿ:ಜಿಲ್ಲೆಯಲ್ಲಿ ಮತ್ತೆ ಮೂರು ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿದ್ದು,ಸೋಂಕಿತರ ಸಂಖ್ಯೆ 36ಕ್ಕೆ ಏರಿದೆ.
ಗಣಿ ನಗರದಲ್ಲಿ ಮತ್ತೆ ಮೂವರಲ್ಲಿ ಕೊರೊನಾ ಪಾಸಿಟಿವ್..ಸೋಂಕಿತರ ಸಂಖ್ಯೆ 36ಕ್ಕೆ ಏರಿಕೆ - ಬಳ್ಳಾರಿ ಕೊರೊನಾ ಆತಂಕ
ಗಣಿನಾಡು ಬಳ್ಳಾರಿಯಲ್ಲಿ ದೆಹಲಿ ಮತ್ತು ಮುಂಬೈ ಮೂಲದಿಂದ ಬಂದಂತಹ ಮೂರು ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು,ಸೋಂಕಿತರ ಸಂಖ್ಯೆ 36ಕ್ಕೆ ಏರಿದೆ.
ದೆಹಲಿ ಮತ್ತು ಮುಂಬೈ ಮೂಲದಿಂದ ಬಂದಂತಹ ಮೂರು ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಬಳ್ಳಾರಿ ನಗರದ ಡೆಂಟಲ್ ಕಾಲೇಜು, ಜಿಲ್ಲೆಯ ಹೊಸಪೇಟೆ ಜಂಭುನಾಥಗುಡ್ಡದ ವಸತಿ ನಿಲಯ ಮತ್ತು ಬಳ್ಳಾರಿಯ ಬಿಸಿಎಂ ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿದ್ದ ಈ ಮೂವರ ಗಂಟಲು ದ್ರವವನ್ನ ಮೇ 22 ರಂದು ಪರೀಕ್ಷೆಗೆ ರವಾನಿಸಲಾಗಿತ್ತು. ನಿನ್ನೆ ಅವರ ವರದಿ ಬಂದಿದ್ದು,ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಮಗಳ ಮದುವೆ ಹಿನ್ನಲೆ, ಮುಂಬೈನಲ್ಲಿ ನೆಲೆಸಿರುವ ತಮ್ಮ ಸಂಬಂಧಿಕರಿಗೆ ಮದುವೆ ಕಾರ್ಡ್ ಹಂಚಲು ಹೋಗಿದ್ದ 40 ವರ್ಷದ ಮಹಿಳೆ, 48 ವರ್ಷದ ಪುರುಷ ಮತ್ತು ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದ ಹೊಸಪೇಟೆ ವ್ಯಕ್ತಿಯೊಂದಿಗೆ ದೆಹಲಿಗೆ ತೆರಳಿದ್ದ 23 ವರ್ಷದ ವ್ಯಕ್ತಿಗೆ ವೈರಸ್ ತಗುಲಿದೆ ಎಂದು ಡಿಹೆಚ್ಒ ಡಾ.ಹೆಚ್.ಎಲ್.ಜನಾರ್ದನ ತಿಳಿಸಿದ್ದಾರೆ.