ಬಳ್ಳಾರಿ:ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು,ಹರಪನಹಳ್ಳಿ ಮೂಲದ 46 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಬಳ್ಳಾರಿಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್: ಸೋಂಕಿತರ ಸಂಖ್ಯೆ 18ಕ್ಕೆ - bellary corona pandemic
ಗುಜರಾತ್ನ ಅಹಮಾಬಾದ್ ನಗರದಿಂದ ಮೂರು ದಿನಗಳ ಹಿಂದಷ್ಟೇ ಬಳ್ಳಾರಿಯ ಜಿಲ್ಲೆಯ ಹರಪನಹಳ್ಳಿಗೆ ಆಗಮಿಸಿದ್ದ 46 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಮೂರನೇ ಹಂತದ ಲಾಕ್ಡೌನ್ ಸಡಿಲಿಕೆ ಹಿನ್ನಲೆ, ಈತ ಗುಜರಾತ್ನ ಅಹಮಾಬಾದ್ ನಗರದಿಂದ ಮೂರು ದಿನಗಳ ಹಿಂದಷ್ಟೇ ಹರಪನಹಳ್ಳಿಗೆ ಆಗಮಿಸಿದ್ದರು. ಅಂತಾರಾಜ್ಯ ಗಡಿಭಾಗದ ಚೆಕ್ಪೊಸ್ಟ್ನಲ್ಲಿ ಈತನಿಗೆ ಕೋವಿಡ್-19 ತಪಾಸಣೆ ನಡೆಸಿ, ಗಂಟಲು ದ್ರವದ ಮಾದರಿಯನ್ನ ಪರೀಕ್ಷೆ ಕಳುಹಿಸಲಾಗಿತ್ತು. ಬಳಿಕ ಅವರನ್ನ ಜಿಂದಾಲ್ ಓಪಿಜೆ ಸೆಂಟರ್ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ನಿನ್ನೆ ಈತನ ಪರೀಕ್ಷಾ ವರದಿ ಬಂದಿದ್ದು,ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಈತನನ್ನ ಕೋವಿಡ್ -19 ಆಸ್ಪತ್ರೆಗೆ ಶಿಫ್ಟ್ ಮಾಡಿ, ಟ್ರಾವೆಲ್ ಹಿಸ್ಟರಿ ಹುಡುಕಾಟ ನಡೆಸಲಾಗುತ್ತದೆ ಎಂದು ಡಿಹೆಚ್ಒ ಡಾ.ಹೆಚ್.ಎಲ್.ಜನಾರ್ದನ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಈವರೆಗೂ 17 ಪಾಸಿಟಿವ್ ಪ್ರಕರಣಗಳಿದ್ದು,ಇದೀಗ ಸೋಂಕಿತರ ಸಂಖ್ಯೆ18ಕ್ಕೆ ಏರಿಕೆಯಾಗಿದೆ.