ಕರ್ನಾಟಕ

karnataka

ETV Bharat / city

ಜಾಗತಿಕ ಮಟ್ಟದಲ್ಲಿ ಭಯೋತ್ಪಾದಕರ ಹೆಡೆಮುರಿ ಕಟ್ಟಲೇಬೇಕು: ಚಿತ್ರ ಕಲಾವಿದ ರಫೀಕ್ ಆಗ್ರಹ - undefined

ವಿಶ್ವದಾದ್ಯಂತ ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತು ಹಾಕಬೇಕು. ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದಕ ಕೃತ್ಯಕ್ಕೆ ಧಿಕ್ಕಾರ ಎಂದು ಚಿತ್ರ ಕಲಾವಿದ ಎಂ.ಡಿ ರಫೀಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದಕ ದಾಳಿ ಕುರಿತು ಆಕ್ರೋಶ ವ್ಯಕ್ತಪಡಿಸಿದ ಚಿತ್ರ ಕಲಾವಿದ ಎಂ.ಡಿ ರಫೀಕ್

By

Published : Apr 25, 2019, 9:28 AM IST

ಬಳ್ಳಾರಿ: ಭಯೋತ್ಪಾದನೆ ಹೊಡೆದೋಡಿಸಲು ಜಾಗತಿಕ ಮಟ್ಟದಲ್ಲಿ ಎಲ್ಲಾ ದೇಶಗಳು ಒಂದಾಗಬೇಕು ಎಂದು ಗಣಿನಾಡಿನ ಚಿತ್ರ ಕಲಾವಿದ ಎಂ.ಡಿ ರಫೀಕ್ ಒತ್ತಾಯಿಸಿದ್ದಾರೆ.

ನಗರದ ರೇಡಿಯೋ ಪಾರ್ಕ್​ನಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ದ್ವೀಪ ರಾಷ್ಟ್ರದಲ್ಲಿ ಮಾನವೀಯತೆಯ ಕಗ್ಗೊಲೆಯಾಗಿದೆ. ಭಯೋತ್ಪಾದನೆ ಯಾವುದೇ ಒಂದು ಧರ್ಮ ಇಲ್ಲ. ಅವರೆಲ್ಲ ರಾಕ್ಷಸರಾಗಿದ್ದು, ಇಂತಹ ಹೀನ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಪ್ರತಿನಿತ್ಯ ಮಾನವೀಯತೆಯ ಮೇಲೆ ಉಗ್ರರು ನಡೆಸುತ್ತಿರುವ ದೌರ್ಜನ್ಯ, ದಬ್ಬಾಳಿಕೆಗಳನ್ನು ಯಾವುದೇ ಧರ್ಮದ ಮುಖಂಡರು ಪ್ರೋತ್ಸಾಹಿಸಬಾರದು ಎಂದರು.

ಶ್ರೀಲಂಕಾದಲ್ಲಿ ನಡೆದ ಉಗ್ರರ ದಾಳಿಗೆ ಚಿತ್ರ ಕಲಾವಿದ ಎಂ.ಡಿ ರಫೀಕ್ಆಕ್ರೋಶ

ವಿಶ್ವದಲ್ಲಿ ಶಾಂತಿ, ನೆಮ್ಮದಿಯನ್ನು ನಿರ್ಮಾಣ ಮಾಡಬೇಕಾಗಿದೆ. ಆದ್ದರಿಂದ ನಾವು ಜಾಗತಿಕ ಮಟ್ಟದಲ್ಲಿ ಎಲ್ಲರೂ ಒಟ್ಟುಗೂಡಬೇಕು, ಮಾನವೀಯತೆಯ ಮೇಲೆ ನಡೆಯುವ ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತು ಹಾಕಬೇಕು. ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದ ಉಗ್ರರಿಗೆ ಧಿಕ್ಕಾರ ಕೂಗುವ ಮೂಲಕ ಚಿತ್ರ ಕಲಾವಿದ ರಫೀಕ್​ ಆಕ್ರೋಶ ಹೊರಹಾಕಿದರು.

For All Latest Updates

TAGGED:

ABOUT THE AUTHOR

...view details