ಬಳ್ಳಾರಿ: ಬಿ.ಇಡಿ ಪರೀಕ್ಷಾ ವೇಳಾಪಟ್ಟಿ ಬದಲಾಯಿಸುವಂತೆ ಒತ್ತಾಯಿಸಿ ಎಐಡಿಎಸ್ಒ ವತಿಯಿಂದ ನಗರದ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಎದುರು ಪ್ರತಿಭಟನೆ ನಡೆಸಲಾಯಿತು.
ಬಿ.ಇಡಿ ಪರೀಕ್ಷಾ ವೇಳಾಪಟ್ಟಿ ಬದಲಾಯಿಸುವಂತೆ ಎಐಡಿಎಸ್ಒ ಮತ್ತು ಎಬಿವಿಪಿ ಸಂಘಟನೆಗಳ ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ಪ್ರತಿಭಟಿಸಲಾಗುತ್ತಿದೆ. ಬಿ.ಇಡಿ ಪರೀಕ್ಷಾ ವೇಳಾಪಟ್ಟಿ ಬದಲಿಸಿ, ಒಂದು ಪರೀಕ್ಷೆಯ ನಂತರ ಅಂತರದೊಂದಿಗೆ ಇನ್ನೊಂದು ಪರೀಕ್ಷೆಗಳನ್ನು ನಡೆಸಬೇಕು. ಫೆಬ್ರವರಿ 28ರಂದು ಭಾನುವಾರ ಕೆಪಿಎಸ್ಸಿ ಪರೀಕ್ಷೆ ನಡೆಯುತ್ತಿದೆ. ಇದರಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಸಹ ತೊಂದರೆಯಾಗಿದೆ. ಹಾಗಾಗಿ ಪರೀಕ್ಷೆಗಳನ್ನು ಅಂತರದೊಂದಿಗೆ ನಡೆಸಬೇಕು ಎಂದು ಕುಲಸಚಿವ ಮೌಲ್ಯಮಾಪನ ಅವರಿಗೆ ಮನವಿ ಮಾಡಿದರು.