ಕರ್ನಾಟಕ

karnataka

ETV Bharat / city

ಕಾನೂನು ಎಲ್ಲರಿಗೂ ಒಂದೇ, ಅಪಘಾತ ಮಾಡಿದವರನ್ನು ಬಂಧಿಸಬೇಕು: ಭೀಮ ನಾಯಕ್ - ಇಂಡಿಯನ್ ಪ್ರೆಟ್ರೋಲ್ ಬಂಕ್ ಇದೆ ಅದರಲ್ಲಿ ಸಿಸಿಟಿವಿಯ ಚಾಲ್ತಿಯಲ್ಲಿಲ್ಲ

ಅಪಘಾತದಲ್ಲಿ ಮೃತಪಟ್ಟಿರುವ ರವಿ ಕುಟುಂಬಕ್ಕೆ ನ್ಯಾಯ ಸಿಗಬೇಕು, ಕಾನೂನು ಎಲ್ಲರಿಗೂ ಒಂದೇ. ಅಪಘಾತ ಮಾಡಿದ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕು ಎಂದು ಶಾಸಕ ಭೀಮನಾಯಕ್ ಹೇಳಿದ್ದಾರೆ.

KN_HPT_2_SHASAK_BHIMANAYAK_BITE_SCRIPT_KA10028
ಅಪಘಾತವನ್ನು ಯಾರೇ ಮಾಡಲಿ ಶಿಕ್ಷೆಯಾಗಬೇಕು, ಆರೋಪಿಗಳನ್ನು ಬಂದಿಸಬೇಕು: ಭೀಮ ನಾಯಕ್

By

Published : Feb 14, 2020, 5:48 PM IST

ಹೊಸಪೇಟೆ: ಅಪಘಾತದಲ್ಲಿ ಮೃತಪಟ್ಟಿರುವ ರವಿ ಕುಟುಂಬಕ್ಕೆ ನ್ಯಾಯ ಸಿಗಬೇಕು, ಕಾನೂನು ಎಲ್ಲರಿಗೂ ಒಂದೇ. ಅಪಘಾತ ಮಾಡಿದ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕು ಎಂದು ಶಾಸಕ ಭೀಮನಾಯಕ್ ಹೇಳಿದ್ದಾರೆ.

ಅಪಘಾತವನ್ನು ಯಾರೇ ಮಾಡಲಿ ಶಿಕ್ಷೆಯಾಗಬೇಕು, ಆರೋಪಿಗಳನ್ನು ಬಂದಿಸಬೇಕು: ಭೀಮ ನಾಯಕ್

ತಾಲೂಕಿನ ಮರಿಯಮ್ಮನ ಹಳ್ಳಿಯ ಅಪಘಾತದಲ್ಲಿ ಮೃತರಾದ ರವಿ ಕುಟುಂಬಕ್ಕೆ ಶಾಸಕ ಭೀಮನಾಯಕ್ ಇಂದು ಸಾಂತ್ವನ ಹೇಳಿ 50 ಸಾವಿರ ರೂ.ಗಳನ್ನು ಪರಿಹಾರವನ್ನು ನೀಡಿದರು. ಕಾನೂನು ಎಲ್ಲರಿಗೂ ಒಂದೇ ತಪ್ಪು ಮಾಡಿದವರು ಯಾರೇ ಆಗಿರಲಿ ಅವರಿಗೆ ಶಿಕ್ಷೆಯನ್ನು ನೀಡಬೇಕು. ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ 16 ಸಿಸಿ ಕ್ಯಾಮೆರಾಗಳಿವೆ ಅವುಗಳು ಯಾಕೆ ಕಾರ್ಯಾರಂಭ ಮಾಡುತ್ತಿಲ್ಲ. ಅದೇ ರೀತಿಯಲ್ಲಿ ಅಪಘಾತವಾದ ಸ್ಥಳದ ಬದಿಯಲ್ಲಿ ಇಂಡಿಯನ್ ಆಯಿಲ್ ಪ್ರೆಟ್ರೋಲ್ ಬಂಕ್ ಇದೆ ಅದರಲ್ಲಿ ಸಿಸಿಟಿವಿಯ ಚಾಲ್ತಿಯಲ್ಲಿಲ್ಲ. ಇದರಿಂದ ಹಲವು ಅನುಮಾನ ಮೂಡುತ್ತವೆ ಎಂದರು.

ಪೊಲೀಸರ ಮೂಲಕ ಸರಕಾರಿ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿಗಳಿಗೆ ಒತ್ತಡವನ್ನು ಹಾಕಲಾಗುತ್ತಿದೆ. ಪ್ರಭಾವಿ ಸಚಿವರ ಮಗ ಇದ್ದನೋ ಇಲ್ಲವೋ ಗೊತ್ತಿಲ್ಲ. ಸೂಕ್ತ ತನಿಖೆಯನ್ನು ಮಾಡಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಅಪಘಾತ ಸ್ಥಳದಲ್ಲಿ ಮದ್ಯದ ಬಾಟಲ್ ಗಳು ಬಿದ್ದಿವೆ. ಈ ಪ್ರಕರಣಕ್ಕೆ ಸಂಬಂದಿಸಿದಂತೆ ಮುಖ್ಯ ಮಂತ್ರಿಗೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಪತ್ರವನ್ನು ಬರೆಯುತ್ತೇನೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ABOUT THE AUTHOR

...view details