ಬಳ್ಳಾರಿ: ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪನವರ ಪರವಾಗಿ ಕೌಲ್ ಬಜಾರ್ನಲ್ಲಿ ಶಾಸಕ ಜಿ. ಸೋಮಶೇಖರ ರೆಡ್ಡಿ ಮತಯಾಚಿಸುತ್ತಿದ್ದಾಗ ಹಿಂದುತ್ವ ವಿಚಾರ ಪ್ರಸ್ತಾಪವೇ ಅಡ್ಡಿಯಾಯಿತು.
ಕೌಲ್ ಬಜಾರ್ನ ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗ ಸಭೆ ನಡೆಸುವ ಮುನ್ನ ಅಲ್ಪಸಂಖ್ಯಾತ ಸಮುದಾಯದ ಯುವ ಮುಖಂಡರೊಬ್ಬರು, ನೀವು ಹೋದಲ್ಲೆಲ್ಲಾ ಹಿಂದುತ್ವ ವಿಚಾರವನ್ನೇ ಪ್ರಸ್ತಾಪಿಸಿ, ಅನ್ಯ ಧರ್ಮೀಯರ ಕೆಂಗಣ್ಣಿಗೆ ಗುರಿಯಾಗಿದ್ದೀರಿ. ಹೀಗಾದ್ರೆ ನಿಮಗೆ ಹ್ಯಾಂಗ್ ವೋಟ್ ಹಾಕಬೇಕೆಂದು ಶಾಸಕರನ್ನ ಪ್ರಶ್ನಿಸಿದರು.
ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪನವರ ಪರ ಶಾಸಕ ಜಿ. ಸೋಮಶೇಖರ ರೆಡ್ಡಿ ಪ್ರಚಾರ ಯುವಕನ ಮಾತು ಆಲಿಸಿದ ಶಾಸಕ ರೆಡ್ಡಿ, ಜೇಬಿನಿಂದ ಮೊಬೈಲ್ ಹೊರತೆಗೆದು, ಉತ್ತರ ಪ್ರದೇಶದಲ್ಲಿ ಬಿಜೆಪಿ ಮೆರವಣಿಗೆಯಲ್ಲಿ ಅಲ್ಪಸಂಖ್ಯಾತರೇ ಹೆಚ್ಚಾಗಿ ಪಾಲ್ಗೊಂಡಿರುವ ವಿಡಿಯೋ ತೋರಿಸಿದ್ರು. ಅದನ್ನ ನೋಡಿದ ಯುವಕ ಮಾತು ನಿಲ್ಲಿಸಿದ್ದಾನೆ.
ಬಳಿಕ ಪಕ್ಕದಲ್ಲೇ ಇದ್ದ ಶಾಸಕರ ಆಪ್ತ ಸಹಾಯಕ, ವೀರ ಶೇಖರರೆಡ್ಡಿಯವರು, ಹಿಂದುತ್ವ ವಿಚಾರ ಪ್ರಸ್ತಾಪವೆಲ್ಲ ಶುದ್ಧ ಸುಳ್ಳು. ಊಹಾಪೋಹದ ಸುದ್ದಿಗೆ ಯಾರೂ ಕಿವಿಗೊಡಬಾರದು ಎಂದು ಯುವಕನನ್ನು ಸಮಾಧಾನಪಡಿಸಿದರು.