ಬಳ್ಳಾರಿ: ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಬರುತ್ತಿದ್ದಾಗ ಬಾಯಾರಿಕೆಯಾಗಿ ನೀರು ಕುಡಿಯಲು ಕಾಲುವೆಗೆ ಇಳಿದ ಯುವಕ, ಅದರಲ್ಲಿ ಬಿದ್ದು ಪ್ರಾಣತೆತ್ತ ಘಟನೆ ಜಿಲ್ಲೆಯಲ್ಲಿ ನಿನ್ನೆ ನಡೆದಿದೆ.
ಕುರುಗೋಡು ಪಟ್ಟಣದ ಉಪ್ಪಾರಪೇಟೆಯ ಗೊಲ್ಲರ ಗೋವಿಂದಪ್ಪ ಎಂಬುವರ ಪುತ್ರ ಚಂದ್ರು (22) ಕಾಲುವೆಗೆ ಬಿದ್ದು ನೀರುಪಾಲಾದ ಯುವಕ. ಚಂದ್ರು ಜಮೀನಿನಲ್ಲಿ ಫಸಲಿಗೆ ಗೊಬ್ಬರ ಹಾಕುವ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ಬಾಯಾರಿಕೆಯಾಗಿ ಬಸವಪುರ ಬಳಿಯ ತುಂಗಭದ್ರಾ ಎಲ್ಎಲ್ಸಿ ಕಾಲುವೆಗೆ ಇಳಿದಿದ್ದಾನೆ.