ಕರ್ನಾಟಕ

karnataka

ETV Bharat / city

ನಿರ್ಮಾಣ ಹಂತದ ಗೋಡೆ ಕುಸಿದು ಕಾರ್ಮಿಕ ಸಾವು, ಇಬ್ಬರಿಗೆ ಗಾಯ - ಬಳ್ಳಾರಿ ಕುಸಿತ ಸುದ್ದಿ

ನಿರ್ಮಾಣ ಹಂತದ ಕಟ್ಟಡದ ಗೋಡೆ ಕುಸಿದು ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.

worker man killed in wall collapse in Bellary  Bellary collapse news  Bellary crime news  ಬಳ್ಳಾರಿಯಲ್ಲಿ ಗೋಡೆ ಕುಸಿದು ಕಾರ್ಮಿಕನ ಸಾವು  ಬಳ್ಳಾರಿ ಕುಸಿತ ಸುದ್ದಿ  ಬಳ್ಳಾರಿ ಅಪರಾಧ ಸುದ್ದಿ
ನಿರ್ಮಾಣ ಹಂತದ ಗೋಡೆ ಕುಸಿದು ಕಾರ್ಮಿಕ ಸಾವು

By

Published : Jun 25, 2022, 1:58 PM IST

ಬಳ್ಳಾರಿ:ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಗೋಡೆ ಕುಸಿದು ಕಾರ್ಮಿಕನೊಬ್ಬ ಮೃತಪಟ್ಟಿದ್ದು, ಮತ್ತಿಬ್ಬರು ಕಾರ್ಮಿಕರು ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಮೃತರನ್ನು ಕೌಲ್ ಬಜಾರ್ ಮೂಲದ ಸುಂಕಪ್ಪಾ ಎಂದು ಗುರುತಿಸಲಾಗಿದೆ. ಗಾಯಗೊಂಡಿದ್ದ ಇಬ್ಬರು ಕಾರ್ಮಿಕರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ.

ನಿರ್ಮಾಣ ಹಂತದ ಗೋಡೆ ಕುಸಿದು ಕಾರ್ಮಿಕ ಸಾವು

ಓದಿ:ಮದುವೆ ಸಮಾರಂಭದ ವೇಳೆ ಕುಸಿದು ಬಿದ್ದ ಮನೆಯ ಬಾಲ್ಕನಿ: 20ಕ್ಕೂ ಅಧಿಕ ಮಂದಿಗೆ ಗಾಯ- VIDEO

ನಗರದ ವಾಸವಿ ಶಾಲೆಯ ಹಿಂಭಾಗದಲ್ಲಿರುವ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಗೋಡೆ ಏಕಾಏಕಿ ಕುಸಿದಿದೆ. ಈ ವೇಳೆ, ಸುಂಕಪ್ಪಾ ಮೃತಪಟ್ಟಿದ್ದಾರೆ. ಅವಶೇಷಗಳು ಅಡಿ ಸಿಲಿಕಿದ್ದು ಇಬ್ಬರು ಕಾರ್ಮಿಕರನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ABOUT THE AUTHOR

...view details