ಬಳ್ಳಾರಿ: ಕಾಣೆಯಾಗಿದ್ದ ತನ್ನ ತಂದೆಯನ್ನು ಹುಡುಕಲು ಹೋಗಿ ಮಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಕೊಳಗಲ್ ಗ್ರಾಮದ ಬಳಿ ನಡೆದಿದೆ.
ಕಾಣೆಯಾದ ತಂದೆಯನ್ನು ಹುಡುಕಲು ಹೋದ ಮಗ ರಸ್ತೆ ಅಪಘಾತದಲ್ಲಿ ಸಾವು - ಬಳ್ಳಾರಿ ತಂದೆ ಹುಡುಕಲು ಹೋಗಿದ್ದ ಮಗ ಸಾವು
ನಾಪತ್ತೆಯಾಗಿದ್ದ ತನ್ನ ತಂದೆಯನ್ನು ಹುಡುಕುವ ನಿಟ್ಟಿನಲ್ಲಿ ಸ್ವಾಮೀಜಿಯೊಬ್ಬರನ್ನು ಭೇಟಿಯಾಗಿ ಮರಳಿ ಮನೆಯತ್ತ ತೆರಳುತ್ತಿದ್ದ ಮಗನೋರ್ವ ಅಪಘಾತದಲ್ಲಿ ಲಾರಿಯ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ.
ಕೊಳಗಲ್ ಅಪಘಾತ
ಬಳ್ಳಾರಿ 35ನೇ ವಾರ್ಡ್ನ ನಿವಾಸಿ ತಿಪ್ಪೇಸ್ವಾಮಿ (40) ಮೃತ ದುರ್ದೈವಿ. ತಿಪ್ಪೇಸ್ವಾಮಿಯವರ ತಂದೆ ದೊರೆಸ್ವಾಮಿ ಮನೆಯಿಂದ ಕಾಣೆಯಾಗಿದ್ದರು. ತನ್ನ ತಂದೆಯ ಜಾಡು ಪತ್ತೆ ಹಚ್ಚಲು ಕೊಳಗಲ್ ಗ್ರಾಮದ ಸ್ವಾಮೀಜಿಯೊಬ್ಬರನ್ನು ಭೇಟಿಯಾಗಿ ಮರಳಿ ಬೈಕ್ನಲ್ಲಿ ಬಳ್ಳಾರಿಗೆ ಆಗಮಿಸುತ್ತಿರುವಾಗ ಅಪಘಾತ ಸಂಭವಿಸಿದೆ. ಲಾರಿ ಟೈಯರ್ ಕೆಳಗೆ ಸಿಲುಕಿರುವ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅದೃಷ್ಟವಶಾತ್, ಹಿಂಬದಿ ಕುಳಿತಿದ್ದ ಪತ್ನಿ ಚಂದ್ರೇಶ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದ ಪಾರಾಗಿದ್ದಾರೆ. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.