ಬಳ್ಳಾರಿ: ಮೊಸಳೆ ದಾಳಿಗೆ ವ್ಯಕ್ತಿಯೋರ್ವ ಬಲಿಯಾಗಿರುವ ಘಟನೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಿಟ್ಟೂರಿನ ತುಂಗಭದ್ರಾ ನದಿ ತೀರದಲ್ಲಿ ನಡೆದಿದೆ. ನಿಟ್ಟೂರಿನ ನಿವಾಸಿ ವೀರೇಶ್ (45) ಮೃತ ವ್ಯಕ್ತಿ.
ದನ ಮೇಯಿಸಲು ಹೋಗಿದ್ದವನ ಮೇಲೆ ಮೊಸಳೆ ದಾಳಿ: ವ್ಯಕ್ತಿ ಸಾವು - ತುಂಗಭದ್ರಾ ನದಿ ತೀರ
ದನ ಮೇಯಿಸಲು ನದಿ ತೀರಕ್ಕೆ ಹೋಗಿದ್ದ ವ್ಯಕ್ತಿ ಮೇಲೆ ಮೊಸಳೆ ದಾಳಿ ಮಾಡಿ, ಕೊಂದು ಹಾಕಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.
ಬಳ್ಳಾರಿಯ ಸಿರಗುಪ್ಪ ತಾಲೂಕಿನಲ್ಲಿ ವ್ಯಕ್ತಿ ಮೇಲೆ ಮೊಸಳೆ ದಾಳಿ
ಈತ ದನ ಮೇಯಿಸಲು ನದಿ ತೀರಕ್ಕೆ ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ವೀರೇಶ್ನ ತೊಡೆ ಭಾಗಕ್ಕೆ ಮೊಸಳೆ ಕಚ್ಚಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ತೆಕ್ಕಲಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಿರುಗುಪ್ಪ ಭಾಗದಲ್ಲಿ ಪದೇ ಪದೇ ಮೊಸಳೆ ದಾಳಿ ನಡೆಯುತ್ತಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ನದಿ ಬಳಿ ಮೊಸಳೆ ಇರುವ ಎಚ್ಚರಿಕೆಯ ನಾಮಫಲಕ ಹಾಕುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.