ಹೊಸಪೇಟೆ: ಟಾಟಾ ವಾಹನದಿಂದ ಆಯತಪ್ಪಿ ಬಿದ್ದು ಬಾಲಕನೋರ್ವ ಮೃತಪಟ್ಟಿರುವ ಘಟನೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ ವೆಂಕಟಾಪುರ ರಸ್ತೆಯ ನೀರಿನ ಟ್ಯಾಂಕ್ ಬಳಿ ನಡೆದಿದೆ.
ಹೊಸಪೇಟೆ: ವಾಹನದಿಂದ ಆಯತಪ್ಪಿ ಬಿದ್ದು ಬಾಲಕ ಸಾವು
ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ ವೆಂಕಟಾಪುರ ರಸ್ತೆ ಬಳಿ ವಾಹನದಿಂದ ಆಯತಪ್ಪಿ ಬಿದ್ದು ಬಾಲಕನೋರ್ವ ಮೃತಪಟ್ಟಿದ್ದಾನೆ.
ಬಾಲಕ ಸಾವು
ಇಂದಿರಾನಗರದ ಶ್ರೀಕಾಂತ (14) ಮೃತ ಬಾಲಕ. ಸ್ಟೀಲ್ ಪಾತ್ರೆ ಮತ್ತು ಸಾಮಾನುಗಳನ್ನು ಮಾರಾಟ ಮಾಡಲು ತೆರಳುತ್ತಿರುವಾಗ ಆಯತಪ್ಪಿ ಬಿದ್ದಿದ್ದಾನೆ. ಬಳಿಕ ಬಾಲಕನನ್ನು ಚಿಕಿತ್ಸೆಗೆಂದು ಕರೆದೊಯ್ಯುತ್ತಿರುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.