ಬಳ್ಳಾರಿ:ಕೊರೊನಾ ವಿರುದ್ಧದ ಹೋರಾಟದಲ್ಲಿ ಒಂದು ಹೆಜ್ಜೆ ಮುನ್ನೆಡೆಯಲು ಕಷ್ಟಪಡುತ್ತಿದ್ದ 99 ವರ್ಷದ ವೃದ್ದ ಗೆಲುವು ಸಾಧಿಸಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕೊರೊನಾ ದೃಢಪಟ್ಟ ಹಿನ್ನೆಲೆ, ಸೆ.1ರಂದು ನಗರದ ಟ್ರಾಮಾಕೇರ್ ಸೆಂಟರ್ನ ಕೋವಿಡ್ ಆಸ್ಪತ್ರೆಗೆ ಸಿರಗುಪ್ಪ ತಾಲೂಕಿನ 99 ವರ್ಷದ ವೃದ್ದ ಅಚ್ಯುತ್ ರಾವ್ ಹಾಗೂ ಅವರ ಮಗ 67 ವರ್ಷದ ರಂಗರಾವ್ ದಾಖಲಾಗಿದ್ದರು. ಕೊರೊನಾ ಸೋಂಕಿತರಾಗಿ ತೀವ್ರ ಆಯಾಸಪಡುತ್ತಿದ್ದ ಅಚ್ಯುತ್ ರಾವ್ ಅವರಿಗೆ ಕುಳಿತುಕೊಳ್ಳಲು ಆಗುತ್ತಿರಲಿಲ್ಲ. ಹಾಸಿಯಿಂದ ಮೇಲೇಳಲು ಕೂಡ ಇನ್ನೊಬ್ಬರ ಸಹಾಯ ಬೇಕಿತ್ತು. ಇವರಿಗೆ ಟ್ರಾಮಾಕೇರ್ ಸೆಂಟರ್ನ ನೋಡಲ್ ಅಧಿಕಾರಿ ಡಾ.ಹರ್ಷ ಹಾಗೂ ನುರಿತ ತಜ್ಞ ವೈದ್ಯರ ತಂಡ, ವಿಶೇಷ ನಿಗಾ ವಹಿಸಿ ಚಿಕಿತ್ಸೆ ನೀಡಿದ್ದರು. ಇದೀಗ ತಂದೆ ಹಾಗೂ ಮಗ ಇಬ್ಬರು ಸಂಪೂರ್ಣ ಗುಣಮುಖರಾಗಿ ಮನೆಗೆ ತರಳಿದ್ದಾರೆ.