ಬಳ್ಳಾರಿ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಇಂದು ಬರೋಬ್ಬರಿ 579 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 4046 ಕ್ಕೆ ಏರಿಕೆಯಾಗಿದೆ. ಮೂರು ಮಂದಿ ಮೃತಪಟ್ಟಿದ್ದಾರೆ.
579 ಮಂದಿಗೆ ಸೋಂಕು ದೃಢ... ಬಳ್ಳಾರಿಯಲ್ಲಿ ಮೂವರ ಬಲಿ! - Ballary latest news
ಕೊರೊನಾ ಕೆಂಗಣ್ಣು ಜಿಲ್ಲೆ ಮೇಲೆ ಬಿದ್ದಿದ್ದು ಇಂದು 579 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಲ್ಲದೆ ಮೂವರು ಬಲಿಯಾಗಿದ್ದಾರೆ.
Ballary corona case
ಹೌದು.. ಜಿಲ್ಲೆಯಲ್ಲಿ ಇಂದು ಒಂದೇ ದಿನ 579 ಮಂದಿಗೆ ಈ ಮಹಾಮಾರಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 4046 ಸೋಂಕಿತರ ಪೈಕಿ ಒಟ್ಟು 1622 ಮಂದಿ ಗುಣಮುಖರಾಗಿದ್ದಾರೆ. 75 ಮಂದಿ ಸಾವನ್ನಪ್ಪಿದ್ದು 2349 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.
ಇನ್ನೂ 3 ಮಂದಿ ಈ ಮಹಾಮಾರಿ ಸೋಂಕಿಗೆ ಬಲಿಯಾಗಿದ್ದಾರೆ ಹಾಗೂ 17 ಜನರು ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಇಂದು ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ.