ಕರ್ನಾಟಕ

karnataka

ETV Bharat / city

COVID: ಬಳ್ಳಾರಿ, ವಿಜಯನಗರ ಜಿಲ್ಲೆಗಳ 449 ಗ್ರಾಮಗಳು ಕೊರೊನಾ ಮುಕ್ತ

ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಜನತೆಗೆ ಸಿಹಿ ಸುದ್ದಿಯೊಂದಿದಿದೆ. ಉಭಯ ಜಿಲ್ಲೆಗಳ 449 ಗ್ರಾಮಗಳು ಕೊರೊನಾ ಮುಕ್ತವಾಗಿವೆ. 66 ಗ್ರಾಮಗಳಲ್ಲಿ 10ಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. 111 ಗ್ರಾಮಗಳಲ್ಲಿ 10ಕ್ಕಿಂತ ಕಡಿಮೆ ಹಾಗೂ ಐದಕ್ಕಿಂತ ಹೆಚ್ಚು ಸೋಂಕಿತರಿದ್ದಾರೆ. 417 ಗ್ರಾಮಗಳಲ್ಲಿ ಐದಕ್ಕಿಂತ ಕಡಿಮೆ ಪ್ರಕರಣಗಳಿವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

449-villages-corona-free-in-bellary-and-vijayanagar-district
ಕೊರೊನಾ ಮುಕ್ತ

By

Published : Jun 10, 2021, 2:48 PM IST

ಬಳ್ಳಾರಿ:ರಾಜ್ಯದಲ್ಲಿ ಕೊರೊನಾ ಪ್ರಭಾವ ದಿನದಿಂದ ದಿನಕ್ಕೆ ಕಡಿಯಾಗುತ್ತಿದೆ. ಅಂತೆಯೇ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಸುಮಾರು 449 ಗ್ರಾಮಗಳು ಕೊರೊನಾ ಸೋಂಕಿನಿಂದ ಮುಕ್ತವಾಗಿವೆ. ಸದ್ಯ ಉಭಯ ಜಿಲ್ಲೆಗಳ 66 ಗ್ರಾಮಗಳಲ್ಲಿ 10ಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಗಣಿನಾಡಿನ ಉಭಯ ಜಿಲ್ಲೆಗಳ 449 ಗ್ರಾಮಗಳು ಕೊರೊನಾ ಮುಕ್ತ

ಬಳ್ಳಾರಿ-13, ಹಡಗಲಿ-69, ಹಗರಿ ಬೊಮ್ಮನಹಳ್ಳಿ-27, ಹರಪನಹಳ್ಳಿ ಮತ್ತು ಹೊಸಪೇಟೆ-93, ಕಂಪ್ಲಿ-19, ಕೊಟ್ಟೂರು-12, ಕೂಡ್ಲಿಗಿ-24, ಕುರುಗೋಡು-84, ಸಂಡೂರು-2 ಹಾಗೂ ಸಿರುಗುಪ್ಪ ತಾಲೂಕಿನ-74 ಗ್ರಾಮಗಳು ಕೊರೊನಾ ಸೋಂಕಿನಿಂದ ಮುಕ್ತವಾಗಿವೆ. ಗ್ರಾಮೀಣ ಭಾಗದಲ್ಲಿ ಕೊಂಚಮಟ್ಟಿಗೆ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಸುಮಾರು 237 ಗ್ರಾಮ ಪಂಚಾಯತ್​ಗಳಿದ್ದು, 1043 ಗ್ರಾಮಗಳಿವೆ. ಈವರೆಗೂ 15,421 ಕೊರೊನಾ ಸೋಂಕಿತರು ಇದ್ದರು. ಇದೀಗ ಕೇವಲ 2687 ಸಕ್ರಿಯ ಪ್ರಕರಣಗಳಿವೆ. ಕಂಪ್ಲಿ ಹಾಗೂ ಕೊಟ್ಟೂರು ತಾಲೂಕಿನಲ್ಲಿ ಸಾವಿರ ಕೊರೊನಾ ಸೋಂಕಿತರ ಸಂಖ್ಯೆಯಿದ್ದು, ಉಳಿದೆಲ್ಲಾ ತಾಲೂಕುಗಳಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿತ್ತು.

ಸದ್ಯ ಉಭಯ ಜಿಲ್ಲೆಗಳ 66 ಗ್ರಾಮಗಳಲ್ಲಿ ಹತ್ತಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಅಂದಾಜು 111 ಗ್ರಾಮಗಳಲ್ಲಿ ಹತ್ತಕ್ಕಿಂತ ಕಡಿಮೆ ಹಾಗೂ ಐದಕ್ಕಿಂತ ಹೆಚ್ಚು ಸೋಂಕಿತರಿದ್ದಾರೆ. 417 ಗ್ರಾಮಗಳಲ್ಲಿ ಐದಕ್ಕಿಂತ ಕಡಿಮೆ ಪ್ರಕರಣಗಳಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.

ABOUT THE AUTHOR

...view details