ಕರ್ನಾಟಕ

karnataka

ETV Bharat / city

ನೆಚ್ಚಿನ ನಟ ಪವನ್ ಕಲ್ಯಾಣ್ ಭೇಟಿಗಾಗಿ ಅಭಿಮಾನಿಯಿಂದ 400 ಕಿ.ಮೀ ಪಾದಯಾತ್ರೆ - ಬಳ್ಳಾರಿ ಅಭಿಯಾನಿ ಪಾದಯಾತ್ರೆ

ಅಭಿಯಾನಿಯೊಬ್ಬ ತಮ್ಮ ನೆಚ್ಚಿನ ನಟ ಪವನ್ ಕಲ್ಯಾಣ್ ಭೇಟಿಯಾಗಲು ಬರೋಬ್ಬರಿ 400 ಕಿಲೋಮೀಟರ್ ಪಾದಯಾತ್ರೆ ಕೈಗೊಂಡಿದ್ದಾರೆ.

ನಟ ಪವನ್ ಕಲ್ಯಾಣ್ ಭೇಟಿಗಾಗಿ ಅಭಿಮಾನಿಯಿಂದ  ಪಾದಯಾತ್ರೆ
ನಟ ಪವನ್ ಕಲ್ಯಾಣ್ ಭೇಟಿಗಾಗಿ ಅಭಿಮಾನಿಯಿಂದ ಪಾದಯಾತ್ರೆ

By

Published : Jun 5, 2022, 2:50 PM IST

Updated : Jun 5, 2022, 4:08 PM IST

ಬಳ್ಳಾರಿ: ಚಿತ್ರರಂಗದ ಸ್ಟಾರ್ ನಟರನ್ನ ಭೇಟಿಯಾಗೋದು ಅಷ್ಟು ಸಲೀಸಲ್ಲ. ಹೀಗಾಗಿ, ಗಣಿ ನಾಡಿನ ಅಭಿಯಾನಿಯೋರ್ವ ತಮ್ಮ ನೆಚ್ಚಿನ ನಟನನ್ನ ಭೇಟಿಯಾಗಲು ಬರೋಬ್ಬರಿ 400 ಕಿಲೋಮೀಟರ್ ಪಾದಯಾತ್ರೆ ನಡೆಸುತ್ತಿದ್ದಾರೆ. ಪವರಸ್ಟಾರ್ ಪವನ್ ಕಲ್ಯಾಣ್ ಭೇಟಿಗಾಗಿ ಬಳ್ಳಾರಿಯ ಲಾಲ ಕಮಾನ್ ನಿವಾಸಿ ಬಿ ಚಂದ್ರಶೇಖರ ಎನ್ನುವರು ಬಳ್ಳಾರಿಯಿಂದ- ಹೈದ್ರಾಬಾದ್ ವರೆಗೂ ಪಾದಯಾತ್ರೆ ಕೈಗೊಂಡಿದ್ದಾರೆ.

ಕಳೆದ ಸೋಮವಾರ ಪಾದಯಾತ್ರೆ ಆರಂಭಿಸಿರುವ ಚಂದ್ರಶೇಖರ್, ಇಂದು ಹೈದರಾಬಾದ್​ನ ಶಾದ್ ನಗರ ತಲುಪಿದ್ದು, ಸಂಜೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಹಾಗೂ ರಾಮಚರಣ್ ಅವರನ್ನು ಭೇಟಿಯಾಗಲಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಪವನ್ ಕಲ್ಯಾಣ್​ರನ್ನ ಭೇಟಿಯಾಗಲು ಪ್ರಯತ್ನಿಸಿದ್ದರು. ಆದ್ರೆ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ, ಬಳ್ಳಾರಿಯಿಂದ ಹೈದರಾಬಾದ್​ವರೆಗೂ ಪಾದಯಾತ್ರೆ ಮೂಲಕ ತೆರಳಿ ನೆಚ್ಚಿನ ನಟನನ್ನು ಭೇಟಿಯಾಗುತ್ತಿರುವುದು ವಿಶೇಷ.

ಟಾಲಿವುಡ್​ ಪವರ್​ ಸ್ಟಾರ್​ ಪವನ್​ ಕಲ್ಯಾಣ ಅವರಿಗೆ ಚಿತ್ರರಂಗ ಮತ್ತು ರಾಜಕೀಯದಲ್ಲಿ ಒಳಿತಾಗಲಿ ಎಂದು ಈ ಪಾದಯಾತ್ರೆ ಕೈಗೊಂಡಿರುವುದಾಗಿ ಅಭಿಮಾನಿ ಚಂದ್ರಶೇಖರ್​ ತಿಳಿಸಿದ್ದಾರೆ. ​

ನಟ ಪವನ್ ಕಲ್ಯಾಣ್ ಭೇಟಿಗಾಗಿ ಅಭಿಮಾನಿಯಿಂದ ಪಾದಯಾತ್ರೆ

ಇದನ್ನೂ ಓದಿ:ಕಂಟೈನರ್ ಡಿಪೋದಲ್ಲಿ ಭಾರಿ ಅಗ್ನಿ ಅವಘಡ: 16 ಮಂದಿ ಸಾವು, 450 ಕ್ಕೂ ಹೆಚ್ಚು ಮಂದಿಗೆ ಗಾಯ

Last Updated : Jun 5, 2022, 4:08 PM IST

ABOUT THE AUTHOR

...view details