ಕರ್ನಾಟಕ

karnataka

ETV Bharat / city

ಗಣಿನಾಡಿನಲ್ಲಿ ಒಂದೇ ದಿನ 23 ಪಾಸಿಟಿವ್.. 94ರಲ್ಲಿ ಈವರೆಗೂ 49 ಮಂದಿ ಡಿಸ್ಚಾರ್ಜ್‌!! - Bellary corona update

ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಿನ ಪತ್ತೆಯಾಗಿದ್ದ 23 ಪ್ರಕರಣಗಳಲ್ಲಿ 19 ಪುರುಷ ಮತ್ತು 4 ಮಹಿಳಾ ರೋಗಿಗಳು. ಜಿಂದಾಲ್​ನಲ್ಲಿ ಇನ್ನೂ ಐದು ದಿನಗಳ‌ ಕಾಲ ಕನಿಷ್ಠ ಸಿಬ್ಬಂದಿಯೊಂದಿಗೆ ಪ್ಲಾಂಟ್ ನಿರ್ವಹಿಸಲು ಸೂಚಿಸಲಾಗಿದೆ.

covid
ಕೊರೊನಾ

By

Published : Jun 10, 2020, 7:04 PM IST

Updated : Jun 10, 2020, 7:13 PM IST

ಬಳ್ಳಾರಿ :ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 23 ಕೊರೊನಾ ಕೇಸ್​ ಪತ್ತೆಯಾಗಿವೆ. ಇದರಿಂದಾಗಿ ಜಿಲ್ಲೆಯ ಕೊರೊನಾ ಪ್ರಕರಣಗಳ ಸಂಖ್ಯೆ 94ಕ್ಕೆ ಏರಿಕೆಯಾಗಿದೆ.

ಜಿಲ್ಲೆಯ ಜಿಂದಾಲ್ ಸಮೂಹ ಸಂಸ್ಥೆಯ ನೌಕರರಲ್ಲಿ ಕಾಣಿಸಿಕೊಂಡಿದ್ದ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದ್ದ 18 ಮಂದಿಗೆ ಹಾಗೂ ಆರೋಗ್ಯ ಸೇವೆಯಲ್ಲಿ ತೊಡಗಿರುವ ಇಬ್ಬರು ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ ಎಂದು ಡಿಸಿ ನಕುಲ್ ತಿಳಿಸಿದ್ದಾರೆ. ಅಲ್ಲದೆ ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿನ ಫೀವರ್ ಕ್ಲಿನಿಕ್​ನಲ್ಲಿ ತಪಾಸಣೆಗೊಳಗಾದ ಒಬ್ಬರು ಹಾಗೂ‌‌ ಮಹಾರಾಷ್ಟ್ರದಿಂದ ಬಳ್ಳಾರಿಗೆ ಆಗಮಿಸಿದ್ದ ಇಬ್ಬರಿಗೆ ಕೊರೊನಾ ಸೋಂಕಿರೋದು ಖಾತ್ರಿಯಾಗಿದೆ.

ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಿನ ಪತ್ತೆಯಾಗಿದ್ದ 23 ಪ್ರಕರಣಗಳಲ್ಲಿ 19 ಪುರುಷ ಮತ್ತು 4 ಮಹಿಳಾ ರೋಗಿಗಳು. ಜಿಂದಾಲ್​ನಲ್ಲಿ ಇನ್ನೂ ಐದು ದಿನಗಳ‌ ಕಾಲ ಕನಿಷ್ಠ ಸಿಬ್ಬಂದಿಯೊಂದಿಗೆ ಪ್ಲಾಂಟ್ ನಿರ್ವಹಿಸಲು ಸೂಚಿಸಲಾಗಿದೆ. ಅಲ್ಲದೆ ಜಿಂದಾಲ್​ನಲ್ಲಿ ಅಗತ್ಯ ಕ್ವಾರಂಟೈನ್‌ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೂ 49 ಮಂದಿ ಗುಣಮುಖರಾಗಿದ್ದು, ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಉಳಿದ ‌44 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.

Last Updated : Jun 10, 2020, 7:13 PM IST

ABOUT THE AUTHOR

...view details