ಕರ್ನಾಟಕ

karnataka

ETV Bharat / city

ಚಾಕು ತೋರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಕಳ್ಳ: ಫಿಲ್ಮಿ ಸ್ಟೈಲ್​​ಲ್ಲಿ ಬೆಳಗಾವಿ ಪೊಲೀಸ್ರ ಸಾಹಸ! ವಿಡಿಯೋ

ಕಳ್ಳತನ ಮಾಡಿ ಓಡಿ ಹೋಗುತ್ತಿದ್ದ ಕಳ್ಳನನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ ಘಟನೆ ಬೆಳಗಾವಿ ಜಿಲ್ಲೆಯ ಝಾಡ್​​ಶಹಾಪುರದಲ್ಲಿ ನಡೆದಿದೆ. ಅಪಾಯವನ್ನು ಲೆಕ್ಕಿಸದೇ ಕಳ್ಳನನ್ನು ಹಿಡಿದ ಪೊಲೀಸರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

zadshahpur-police-arrested-theft-in-cinema-style
ಬೆಳಗಾವಿ ಕಳ್ಳರ ಬಂಧನ

By

Published : Dec 6, 2020, 10:07 PM IST

Updated : Dec 6, 2020, 10:20 PM IST

ಬೆಳಗಾವಿ:ಪೊಲೀಸರಿಗೆ ಚಾಕು ತೋರಿಸಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ ಮನೆಗಳ್ಳನನ್ನು ಬೆಳಗಾವಿ ಗ್ರಾಮೀಣ ಪೊಲೀಸರು ಚೇಜ್ ಮಾಡಿ, ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ.

ಚೇಜ್ ಮಾಡಿ ಆರೋಪಿಯನ್ನು ಖೆಡ್ಡಾಕ್ಕೆ ಕೆಡವಿದ ಪೊಲೀಸರ ಸಾಹಸಮಯ ದೃಶ್ಯ ಸ್ಥಳೀಯರ ಮೊಬೈಲಿನಲ್ಲಿ ಸೆರೆಯಾಗಿದೆ‌.

ಬೆಳಗಾವಿ ಗ್ರಾಮೀಣ ಠಾಣೆಯ ಕಾನ್ಸ್​​​ಟೇಬಲ್​ಗಳಾದ ಯೋಗೇಶ ತಾಲಿವಾಡ ಹಾಗೂ ಚೆನ್ನಪ್ಪ ಹುನಶ್ಯಾಲ್ ಜೀವದ ಹಂಗು ತೊರೆದು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಬೆಳಗಾವಿ ತಾಲೂಕಿನ ಜಾಡ್ ಶಹಾಪುರ್ ಗ್ರಾಮದ ಜಮೀನುವೊಂದರಲ್ಲಿ ಈ ಘಟನೆ ನಡೆದಿದೆ‌.

ಸಿನಿಮೀಯ ರೀತಿಯಲ್ಲಿ ಹೊಲದಲ್ಲಿ ಬೆನ್ನಟ್ಟಿ ಕಳ್ಳರನ್ನ ಹಿಡಿದ ಖಾಕಿ

ಹಾಡಹಗಲೇ ಮನೆಗಳಿಗೆ ಕನ್ನ ಹಾಕುತ್ತಿದ್ದ ಗೋವಾ ಮೂಲದ ಪ್ರಕಾಶ್ ಪಾಟೀಲ್, ನಿಪಾಯಿ ಮಂಡಲ್ ನನ್ನು ಪೊಲೀಸರು ಬಂಧಿಸಿದ್ದಾರೆ‌. ಜಾಡ್ ಶಹಾಪುರ ಗ್ರಾಮದ ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಪ್ಪ ಗೋರಲ್ ಮನೆಗೆ ಕನ್ನ ಹಾಕಲು ಯತ್ನಿಸಿದ ಈ ಇಬ್ಬರ ಕೃತ್ಯವನ್ನು ‌ಸ್ಥಳೀಯರು ನೋಡಿದ್ದಾರೆ. ಆಗ ನಿಪಾಯಿ ಮಂಡಲ್ ನನ್ನು ಸ್ಥಳೀಯರು ಹಿಡಿದು ಧರ್ಮದೇಟು ನೀಡಿದ್ದಾರೆ. ಪ್ರಕಾಶ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾಗ, ಸ್ಥಳೀಯರು ಪೊಲೀಸರ ಗಮನಕ್ಕೆ ತಂದಿದ್ದಾರೆ.

ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು, ಆರೋಪಿಯನ್ನು ಚೇಜ್ ಮಾಡಿದ್ದಾರೆ. ಆಗ ಆರೋಪಿ ಚಾಕು ತೋರಿಸಿ ಹೆದರಿಸಲು ಮುಂದಾದಾಗ ಹಿಂಬದಿಯಿಂದ ಮತ್ತೋರ್ವ ಕಾನ್ಸ್​ಟೇಬಲ್​, ಆರೋಪಿಯ ಮೇಲೆ ಎಗರಿ ಹಿಡಿದಿದ್ದಾರೆ. ಬಳಿಕ ಕೈಯಲ್ಲಿದ್ದ ಚಾಕು ಕಸಿದುಕೊಂಡಿದ್ದೇ ತಡ ಸ್ಥಳೀಯರು ಕಳ್ಳನ ಮೇಲೆ ಹಲ್ಲೆ ನಡೆಸಲು ಮುಗಿಬಿದ್ದಿದ್ದಾರೆ. ಬಳಿಕ ಆರೋಪಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿ, ಬಂಧಿತನಿಂದ ಮಾರಕಾಸ್ತ್ರಗಳು, ಕಾರಿನ ನಕಲಿ ನಂಬರ್ ಪ್ಲೇಟ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಬೆಳಗಾವಿ ಗ್ರಾಮೀಣ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ-ಗ್ರಾ.ಪಂ. ಚುನಾವಣೆಗೆ ಡಿ.7 ಮತ್ತು 11 ರಂದು ಅಧಿಸೂಚನೆ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ

Last Updated : Dec 6, 2020, 10:20 PM IST

ABOUT THE AUTHOR

...view details