ಬೆಳಗಾವಿ :ನಿರುದ್ಯೋಗ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಸುವರ್ಣಸೌಧ ಮುತ್ತಿಗೆಗೆ ತೆರಳುತ್ತಿದ್ದ ಯೂಥ್ ಕಾಂಗ್ರೆಸ್ ಪ್ರತಿಭಟನಾ ರ‍್ಯಾಲಿಯನ್ನು ಪೊಲೀಸರು ತಡೆದಿದ್ದಾರೆ. ಕೆಪಿಸಿಸಿ ಯುವ ಘಟಕದ ಅಧ್ಯಕ್ಷ ರಕ್ಷಾ ರಾಮಯ್ಯ ನೇತೃತ್ವದಲ್ಲಿ ಈ ರ‍್ಯಾಲಿ ನಡೆಯುತ್ತಿದೆ.
ನಿರುದ್ಯೋಗ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಯೂಥ್ ಕಾಂಗ್ರೆಸ್ ಪ್ರತಿಭಟನಾ ರ‍್ಯಾಲಿ.. ರ‍್ಯಾಲಿಯನ್ನು ತಡೆದಾಗ ಪೊಲೀಸರು ಹಾಗೂ ಕೈ ಕಾರ್ಯಕರ್ತರ ನಡುವೆ ಪರಸ್ಪರ ನೂಕಾಟ-ತಳ್ಳಾಟ ನಡೆಯಿತು. ಮಹಿಳಾ ಕಾರ್ಯಕರ್ತರೆಯರನ್ನು ಪೊಲೀಸರು ತಳ್ಳಾಡಿದರು. ಈ ವೇಳೆ ಕೈ ಕಾರ್ಯಕರ್ತರು ಪೊಲೀಸರ ಜತೆ ವಾಗ್ವಾದ ನಡೆಸಿದರು.
ಬಳಿಕ ಪೊಲೀಸರು ಕಾರ್ಯಕರ್ತರನ್ನು ಸುವರ್ಣ ಗಾರ್ಡನ್ ಪ್ರತಿಭಟನಾ ಸ್ಥಳಕ್ಕೆ ಕರೆದೊಯ್ದರು. ಈ ಯುವ ಕಾಂಗ್ರೆಸ್ ರ‍್ಯಾಲಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸಾಥ್ ನೀಡಿದ್ದು, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ ಕೂಡ ಭಾಗವಹಿಸಿದ್ದರು.
ನಿರುದ್ಯೋಗ ನಿವಾರಣೆ, ಯುವಕರ ಶಿಕ್ಷಣ, ಸಾಲ ಮನ್ನಾ ಮಾಡಬೇಕು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಭರ್ತಿ ಮಾಡಿಕೊಳ್ಳಬೇಕು ಎಂಬುದು ಪ್ರತಿಭಟನಾಕಾರರ ಆಗ್ರಹವಾಗಿದೆ.
ಇದನ್ನೂ ಓದಿ:ಹಾ.. ಹಾ.. ಹೋ ಶಬ್ದಗಳಿದ್ದ ವಿಡಿಯೋಗಳಿಗೆ ಸ್ಟೇ ತಂದ 12 ಪತಿವ್ರತರು.. ಬಿಜೆಪಿ ಸುಮ್ಮನ್ಯಾಕಿದೆ?.. ಇಬ್ರಾಹಿಂ