ಕರ್ನಾಟಕ

karnataka

ETV Bharat / city

ಯುವಕರಿಗೆ ಉದ್ಯೋಗ ನೀಡಲು ಒತ್ತಾಯಿಸಿ ಇಂದು ಯುವ ಕಾಂಗ್ರೆಸ್‌ನಿಂದ ಬೆಳಗಾವಿ ಚಲೋ.. - ಯುವಕರ ನಡೆ ಬೆಳಗಾವಿ ಕಡೆ

ಬೆಳಗಾವಿ ನಗರದಿಂದ ಸುವರ್ಣ ವಿಧಾನಸೌಧಕ್ಕೆ ತೆರಳುವ ಕಾಂಗ್ರೆಸ್ ನಾಯಕರು ಸರ್ಕಾರದ ಮೇಲೆ ಒತ್ತಡ ಹೇರುವ ತಂತ್ರಗಾರಿಕೆ ರೂಪಿಸಿದ್ದಾರೆ..

ಯುವ ಕಾಂಗ್ರೆಸ್

By

Published : Dec 17, 2021, 9:01 AM IST

ಬೆಳಗಾವಿ : ಯುವ ಸಮೂಹಕ್ಕೆ ಉದ್ಯೋಗ ನೀಡಿ, ಇಲ್ಲವೇ ನಿರುದ್ಯೋಗ ಭತ್ಯೆ ಕೊಡಿ ಎಂಬ ಬೇಡಿಕೆ ಮುಂದಿಟ್ಟು ಕೆಪಿವೈಸಿಸಿ ಅಧ್ಯಕ್ಷ ಎಂ ಎಸ್ ರಕ್ಷಾ ರಾಮಯ್ಯ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಇಂದು ಬೆಳಗಾವಿ ಚಲೋ ಹೋರಾಟ ಕೈಗೊಳ್ಳಲಾಗಿದೆ.

ಖಾಲಿ ಇರುವ ಸರ್ಕಾರಿ ಹುದ್ದೆಗಳ ನೇಮಕಾತಿಗಳನ್ನು ತಕ್ಷಣ ಆರಂಭಿಸಬೇಕು. ಉದ್ಯೋಗ ಸೃಷ್ಟಿಸದಿದ್ದರೆ ಮಾಸಿಕ 9,000 ರೂ. ನಿರುದ್ಯೋಗ ಭತ್ಯೆ ಕೊಡುವಂತೆ ಆಗ್ರಹಿಸಿ 'ಯುವಕರ ನಡೆ ಬೆಳಗಾವಿ ಕಡೆ' ಎಂಬ ಘೋಷಣೆಯೊಂದಿಗೆ ಬೆಳಗಾವಿ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ. ಹೋರಾಟದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ.

ಬೆಳಗಾವಿ ನಗರದಿಂದ ಸುವರ್ಣ ವಿಧಾನಸೌಧಕ್ಕೆ ತೆರಳುವ ಕಾಂಗ್ರೆಸ್ ನಾಯಕರು ಸರ್ಕಾರದ ಮೇಲೆ ಒತ್ತಡ ಹೇರುವ ತಂತ್ರಗಾರಿಕೆ ರೂಪಿಸಿದ್ದಾರೆ. ಅಧಿವೇಶನ ಆರಂಭದ ದಿನ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿದ್ದ ಕಾಂಗ್ರೆಸ್ ನಾಯಕರು, ಉತ್ತರ ಕರ್ನಾಟಕ ಭಾಗದ ಅತಿವೃಷ್ಟಿಯಿಂದ ರಾಗಿ ಬೆಳೆ ಹಾನಿ ಉಂಟಾಗಿದೆ. ಅದಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದರು. ಭಾನುವಾರ ಖಾನಾಪುರದಲ್ಲಿ ಆರಂಭವಾಗಿ ಸೋಮವಾರ ಸುವರ್ಣ ವಿಧಾನಸೌಧ ಮುಂಭಾಗ ಮುಕ್ತಾಯಗೊಂಡ ಈ ಪಾದಯಾತ್ರೆಯಲ್ಲಿ ಕೊನೆಯ ದಿನ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಭಾಗಿಯಾಗಿದ್ದರು.

ನಿನ್ನೆ ಗುರುವಾರ ಇನ್ನೊಂದು ಹಂತದ ಹೋರಾಟದ ರೂಪವಾಗಿ ಬೆಳಗಾವಿ ಕಾಂಗ್ರೆಸ್ ಕಚೇರಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಮೂಲಕ ಬೆಳಗಾವಿ ಸುವರ್ಣ ವಿಧಾನಸೌಧದವರೆಗೆ ಕಾಂಗ್ರೆಸ್ ನಾಯಕರು ಟ್ರಾಕ್ಟರ್​​ ರ್ಯಾಲಿ ನಡೆಸಿದ್ದರು. ರೈತರ ಸಮಸ್ಯೆಗೆ ಪರಿಹಾರ ನೀಡುವಂತೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್ ನಾಯಕರು ಕೈಗೊಂಡ ಪ್ರತಿಭಟನೆ ಇನ್ನೊಂದು ಹಂತದಲ್ಲಿ ಸರ್ಕಾರಕ್ಕೆ ಚುರುಕು ಮುಟ್ಟಿಸುವ ಕಾರ್ಯ ಮಾಡಿದೆ. ಇದೀಗ ಹೋರಾಟದ ಮೂರನೇ ಹಂತವಾಗಿ ಯುವ ಕಾಂಗ್ರೆಸ್ ಮೂಲಕ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ.

ABOUT THE AUTHOR

...view details