ಕರ್ನಾಟಕ

karnataka

ETV Bharat / city

ಸಂಕೇಶ್ವರದಲ್ಲಿ ಶೂಟೌಟ್ ನಡೆಸಿ ಮಹಿಳೆಯ ಕೊಲೆ! - ಬೆಳಗಾವಿಯಲ್ಲಿ ಮಹಿಳೆಯ ಕೊಲೆ

ಕೊಲೆಯಾದ ಮಹಿಳೆ ಅಕ್ರಮವಾಗಿ ಬಡ್ಡಿ ವ್ಯವಹಾರ ನಡೆಸುತ್ತಿದರೆಂದು ಹೇಳಲಾಗುತ್ತಿದೆ‌. ಪ್ರಾಥಮಿಕ ಮಾಹಿತಿಯ ಪ್ರಕಾರ, ಕೊಲೆಗೆ ಬಡ್ಡಿ ವ್ಯವಹಾರ ಕಾರಣ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

women shot dead in belagavi
ಸಂಕೇಶ್ವರದಲ್ಲಿ ಶೂಟೌಟ್ ನಡೆಸಿ ಮಹಿಳೆಯ ಕೊಲೆ

By

Published : Jan 16, 2022, 1:33 PM IST

ಚಿಕ್ಕೋಡಿ (ಬೆಳಗಾವಿ): ಮಹಿಳೆಯೋರ್ವರ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಸಂಕೇಶ್ವರ ಪಟ್ಟಣದಲ್ಲಿ‌ ನಡೆದಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈಗಾಗಲೇ ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ‌ ಸಂಕೇಶ್ವರ ಪಟ್ಟಣದ ನಿವಾಸಿ ಶೈಲಾ ನಿರಂಜನ ಸುಭೇದಾರ (56) ಎಂಬುವರ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಲಾಗಿದೆ. ಆರೋಪಿಗಳು ಮಹಿಳೆಯ ತಲೆಗೆ ಪಿಸ್ತೂಲಿನಿಂದ ಶೂಟ್ ಮಾಡಿ ಪರಾರಿ ಆಗಿದ್ದಾರೆ.

ಇದನ್ನೂ ಓದಿ:ಬೆಳಗಾವಿ: ಮೂವರು ಕಂದಮ್ಮಗಳನ್ನು ಬಲಿ ಪಡೆದ ರೂಬೆಲ್ಲಾ ಚುಚ್ಚುಮದ್ದು

ಕೊಲೆಯಾದ ಮಹಿಳೆ ಅಕ್ರಮವಾಗಿ ಬಡ್ಡಿ ವ್ಯವಹಾರ ನಡೆಸುತ್ತಿದರೆಂದು ಹೇಳಲಾಗುತ್ತಿದೆ‌. ಪ್ರಾಥಮಿಕ ಮಾಹಿತಿಯ ಪ್ರಕಾರ, ಕೊಲೆಗೆ ಬಡ್ಡಿ ವ್ಯವಹಾರ ಕಾರಣ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details