ಬೆಳಗಾವಿ: ಭೂಮಿ ಒತ್ತುವರಿ ಮಾಡಿ ನಿರ್ಮಿಸಿದ್ದ ಕಾಂಪೌಂಡ್ ತೆರವುಗೊಳಿಸಲು ಹೋಗಿದ್ದ ಪಿಡಿಒ ಮೇಲೆ ಸ್ಥಳೀಯರು ಹಲ್ಲೆಗೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ನಡೆದಿದೆ.
ತುಕ್ಕಾನಟ್ಟಿ ಗ್ರಾಮದ ಪಿಡಿಒ ವೀರಭದ್ರ ಗುಂಡಿ ಮೇಲೆ, ಭೂಮಿ ಒತ್ತವರಿ ಮಾಡಿಕೊಂಡವರು ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ, ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿಯಲು ಮುಂದಾಗುತ್ತಿದ್ದಂತೆ ಮಹಿಳೆಯೊಬ್ಬರು ಹೈಡ್ರಾಮಾ ಮಾಡಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ತಾನೇ ಸೀರೆ ಹರಿದುಕೊಂಡು ನನ್ನನ್ನು ಪಿಡಿಒ ಎಳೆದಾಡಿದ್ದಾನೆ ಎಂದು ಬಾಳವ್ವಾ ಹುಲಕುಂದ ಎಂಬ ಮಹಿಳೆ ಹೈಡ್ರಾಮಾ ಮಾಡಿದ್ದಾರೆ.