ಬೆಳಗಾವಿ: ನಗರದ ಬಸವೇಶ್ವರ ವೃತ್ತದ ಬಳಿಯ ಎಲ್ಐಸಿ ಕಚೇರಿಯ ಆವರಣದಲ್ಲಿ ಕಸ ಗುಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ, ತೀವ್ರವಾಗಿ ಗಾಯಗೊಂಡ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದುರ್ಘಟನೆ ಇಂದು ಬೆಳಗ್ಗೆ ನಡೆದಿದೆ.
ಟೀಳಕವಾಡಿಯ ಪಿಕೆ ಕ್ವಾರ್ಟಸ್ನಲ್ಲಿರುವ ಅನಿತಾ ರಾಜೇಶ್ ಬನ್ಸ್ (52) ಮೃತಪಟ್ಟವರು. ಅನಿತಾ ಎಂದಿನಂತೆ ಎಲ್ಐಸಿ ಕಚೇರಿಗೆ ಆಗಮಿಸಿ ಆವರಣ ಶುಚಿಗೊಳಿಸುತ್ತಿದ್ದರು. ಈ ಸಂದರ್ಭದಲ್ಲಿ ಎಲ್ಐಸಿ ಆವರಣದಿಂದ ಕಾರು ಹೊರತೆಗೆಯುವ ಸಂದರ್ಭದಲ್ಲಿ ಚಾಲಕ ಗುರುರಾಜ ಕುಲಕರ್ಣಿ, ಮಹಿಳೆಗೆ ಡಿಕ್ಕಿ ಹೊಡೆಸಿದ್ದಾನೆ.