ಬೆಳಗಾವಿ: ಕೃಷಿ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ಸಂದರ್ಭದಲ್ಲಿ ಬೆದರಿದ ಜೋಡೆತ್ತುಗಳು ಬಾವಿಗೆ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ರಾಯಬಾಗ ತಾಲೂಕಿನಲ್ಲಿ ನಡೆದಿದೆ.
ಉಳುಮೆ ವೇಳೆ ಹೆದರಿದ ಜೋಡೆತ್ತು.. ಬಾವಿಗೆ ಬಿದ್ದು ರಾಸುಗಳು ದಾರುಣ ಸಾವು - bulls jump into well died
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಬಸ್ತವಾಡದ ರೈತ ಲಗಮಣ್ಣ ಹುಕ್ಕೇರಿ ಎಂಬುವರಿಗೆ ಸೇರಿದ ಜೋಡೆತ್ತುಗಳು ಬಾವಿಗೆ ಬಿದ್ದು ಸಾವಿಗೀಡಾಗಿವೆ.
ಎತ್ತುಗಳ ಕಳೇಬರ
ರಾಯಭಾಗ ತಾಲೂಕು ಬಸ್ತವಾಡ ಗ್ರಾಮದ ರೈತ ಲಗಮಣ್ಣ ಹುಕ್ಕೇರಿ ಎಂಬುವರಿಗೆ ಸೇರಿದ ಜೋಡೆತ್ತುಗಳು ಸಾವಿಗೀಡಾಗಿವೆ. ಅಂದಾಜು 2 ಲಕ್ಷ ರೂ. ಮೌಲ್ಯದ ಜೋಡೆತ್ತುಗಳನ್ನು ಕಳೆದುಕೊಂಡು ರೈತ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾನೆ.
ಸ್ಥಳೀಯರು ಹರಸಾಹಸಪಟ್ಟು ಎತ್ತುಗಳ ಕಳೇಬರವನ್ನು ಹೊರ ತೆಗೆದಿದ್ದಾರೆ. ಈ ಕುರಿತು ಹಾರೋಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.