ಚಿಕ್ಕೋಡಿ:ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಕೃಷ್ಣಾ, ದೂಧ್ ಗಂಗಾ, ವೇದಗಂಗಾ ನದಿಗಳಿಗೆ 25 ಸಾವಿರಕ್ಕಿಂತ ಹೆಚ್ಚು ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನದಿ ನೀರಿನ ಮಟ್ಟದಲ್ಲಿ ಎರಡು ಅಡಿಯಷ್ಟು ಏರಿಕೆಯಾಗಿದೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಜಡಿಮಳೆ; ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಏರಿಕೆ - ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಏರಿಕೆ
ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ವಿಪರೀತ ಮಳೆ ಸುರಿಯುತ್ತಿದ್ದು, ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಎರಡು ಅಡಿಯಷ್ಟು ಏರಿಕೆ ಕಂಡಿದೆ.
ಕೃಷ್ಣಾ ನದಿ
ಚಿಕ್ಕೋಡಿ ಉಪವಿಭಾಗದಲ್ಲಿ ಎರಡು ದಿನಗಳಿಂದ ಮಳೆ ಪ್ರಮಾಣ ಹೆಚ್ಚಾಗಿದ್ದು, ಈ ನೀರು ಕೂಡಾ ನದಿಗಳಿಗೆ ಸೇರುವುದರಿಂದ ಮತ್ತಷ್ಟು ನದಿ ನೀರಿನ ಪ್ರಮಾಣದಲ್ಲಿ ಏರಿಕೆ ಕಾಣಬಹುದಾಗಿದೆ.
ಮಹಾರಾಷ್ಟ್ರದ ವರುಣಾ, ರಾಧಾನಗರ, ಕೊಯ್ನಾ, ಕಳಮ್ಮವಾಡಿ ಹಾಗೂ ಮಹಾಬಳೇಶ್ವರ ಸೇರಿದಂತೆ ವಿವಿಧ ಭಾಗಗಳಿಂದ ಮಳೆಯಾಗಿ ರಾಜಾಪೂರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ 20 ಸಾವಿರ ಕ್ಯೂಸೆಕ್ ಹಾಗೂ ಚಿಕಲಿ ಬ್ಯಾರೇಜ್‌ದಿಂದ ದೂಧಗಂಗಾ ಮತ್ತ ವೇದಗಂಗಾ ನದಿಗೆ 5 ಸಾವಿರಕ್ಕೂ ಅಧಿಕ ಕ್ಯೂಸೆಕ್ ಹೀಗೆ ಒಟ್ಟು 25ಸಾವಿರಕ್ಕೂ ಅಧಿಕ ನೀರು ಮಹಾದಿಂದ ಹರಿದು ಬರುತ್ತಿದೆ.