ಕರ್ನಾಟಕ

karnataka

ETV Bharat / city

ರಾಜಾಪೂರ ಡ್ಯಾಂನಿಂದ ಕೃಷ್ಣಾನದಿಗೆ ಹರಿದು ಬಂದ ನೀರು : ರೈತರ ಮೊಗದಲ್ಲಿ ಹರ್ಷ - undefined

ಮಹಾರಾಷ್ಟ್ರದ ರಾಜಾಪೂರ ಡ್ಯಾಂನಿಂದ ಕೃಷ್ಣಾನದಿಗೆ ನೀರು ಬಿಟ್ಟಿದ್ದು, ಚಿಕ್ಕೋಡಿ ತಾಲೂಕಿನ ಹಲವೆಡೆ ನೀರಿಲ್ಲದೇ ಕಂಗಾಲಾಗಿದ್ದ ಜನರಿಗೆ ಹೆಚ್ಚು ಅನುಕೂಲವಾಗಿದೆ.

ಕೃಷ್ಣಾನದಿಗೆ ಹರಿದು ಬಂದ ನೀರು

By

Published : Jun 17, 2019, 2:08 AM IST

ಚಿಕ್ಕೋಡಿ : ಮಹಾರಾಷ್ಟ್ರದ ರಾಜಾಪೂರ ಡ್ಯಾಂನಿಂದ ಕೃಷ್ಣಾನದಿಗೆ ಭಾರಿ ಪ್ರಮಾಣದ ನೀರು ಹರಿದು ಬಂದಿದ್ದು, ಕಳೆದ ನಾಲ್ಕು ತಿಂಗಳಿಂದ ನೀರಿಲ್ಲದೆ ಕಂಗಾಲಾಗಿದ್ದ ರೈತರ ಮೊಗದಲ್ಲಿ ಸಂತಸ ಮೂಡಿದೆ.

ಕೃಷ್ಣಾನದಿಗೆ ಹರಿದು ಬಂದ ನೀರು

ಚಿಕ್ಕೋಡಿ ತಾಲೂಕಿನ ನದಿತೀರದ ಗ್ರಾಮಗಳಾದ ಯಡೂರ, ಮಾಂಜರಿ, ಚಂದೂರ, ಅಂಕಲಿ, ಇಂಗಳಿ, ಕಲ್ಲೋಳ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಕೃಷ್ಣಾನದಿಗೆ ಬೃಹತ್ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಲವು ದಿನಗಳಿಂದ ನೀರಿಲ್ಲದೆ ಬಾಯಿ ಬಡಿದುಕೊಳ್ಳುತ್ತಿದ್ದ ಜನತೆ ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.

ಇನ್ನು ಕಾಗವಾಡ ತಾಲೂಕಿನ ಇಂಗಳಿ ಗ್ರಾಮದವರೆಗೂ ನೀರು ಬಂದಿದ್ದು, ಹೀಗೆ ನೀರು ಬರುತ್ತಿದ್ದರೆ ರಾಯಬಾಗ, ಅಥಣಿ ತಾಲೂಕಿನವರೆಗೂ ಹೋಗಿ ತಲುಪುವ ಸಾಧ್ಯತೆಗಳಿವೆ. ಆದ್ರೆ ಬೇಸರದ ಸಂಗತಿ ಎಂದರೆ ಇನ್ನೂ ಸಹ ಮಹಾರಾಷ್ಟ್ರ ಸರ್ಕಾರದ ಜೊತೆ ಕರ್ನಾಟಕ ಸರ್ಕಾರ ನೀರಿನ ಒಡಂಬಡಿಕೆಯನ್ನು ಮಾಡಿಕೊಳ್ಳದೆ ಇರುವುದು ಗಡಿಭಾಗದ ಜನತೆಗೆ ನಿರಾಸೆಯನ್ನು ಮೂಡಿಸಿದೆ.

For All Latest Updates

TAGGED:

ABOUT THE AUTHOR

...view details