ಬೆಳಗಾವಿ: ಸದಾ ಒಂದಿಲ್ಲೊಂದು ಯಡವಟ್ಟು ಮಾಡುತ್ತಿರುವ ಬಿಮ್ಸ್ ಆಡಳಿತ ಮಂಡಳಿ ಆಸ್ಪತ್ರೆ ಮುಂಭಾಗದಲ್ಲಿ ಸಾರ್ವಜನಿಕರು ಕುಳಿತುಕೊಳ್ಳುವ ಜನನಿಬಿಡ ಪ್ರದೇಶದಲ್ಲೇ ಸೋಂಕಿತರಿಗೆ ಬಳಸಲಾಗುವ ತ್ಯಾಜ್ಯ ವಸ್ತುಗಳನ್ನು ಎಸೆಯುವ ಮೂಲಕ ಕೊರೊನಾ ಹೆಚ್ಚಳಕ್ಕೆ ಕಾರಣರಾಗುತ್ತಿದ್ದಾರೆ.
ಆಸ್ಪತ್ರೆ ಆವರಣದಲ್ಲೇ ಸೋಂಕಿತರಿಗೆ ಬಳಸಲಾಗುವ ತ್ಯಾಜ್ಯ ಎಸೆವ ಬೀಮ್ಸ್ ಸಿಬ್ಬಂದಿ - ಆಸ್ಪತ್ರೆ ಆವರಣದಲ್ಲೇ ಸೋಂಕಿತರಿಗೆ ಬಳಸಲಾಗುವ ತ್ಯಾಜ್ಯ ಎಸೆವ ಬೀಮ್ಸ್ ಸಿಬ್ಬಂದಿ
ಬೀಮ್ಸ್ ಆಸ್ಪತ್ರೆಯ ಮಕ್ಕಳ ಹೆರಿಗೆ ವಾರ್ಡ್ ಮುಂಭಾಗದಲ್ಲಿ ರೋಗಿಗಳ ಸಂಬಂಧಿಕರು,ಸಾರ್ವಜನಿಕರು ಕುಳಿತುಕೊಳ್ಳುವ ಸ್ಥಳದಲ್ಲಿ ಸೋಂಕಿತರಿಗೆ ಬಳಸಲಾಗುವ ತ್ಯಾಜ್ಯ ವಸ್ತುಗಳನ್ನು ಹಾಗೂ ಪಾರ್ಸಲ್ ತಂದಿರುವ ಊಟದ ತಟ್ಟೆಗಳು, ಪ್ಲಾಸ್ಟಿಕ್ ಸೇರಿದಂತೆ ಇತರ ವಸ್ತುಗಳನ್ನು ಎಸೆಯಲಾಗುತ್ತಿದೆ.
![ಆಸ್ಪತ್ರೆ ಆವರಣದಲ್ಲೇ ಸೋಂಕಿತರಿಗೆ ಬಳಸಲಾಗುವ ತ್ಯಾಜ್ಯ ಎಸೆವ ಬೀಮ್ಸ್ ಸಿಬ್ಬಂದಿ BIMS](https://etvbharatimages.akamaized.net/etvbharat/prod-images/768-512-06:56:13:1621085173-kn-bgm-02-15-bims-yadvattu-vsl-ka10029-15052021185008-1505f-1621084808-266.jpg)
ಹೌದು, ನಗರದ ಬೀಮ್ಸ್ ಆಸ್ಪತ್ರೆಯ ಮಕ್ಕಳ ಹೆರಿಗೆ ವಾರ್ಡ್ ಮುಂಭಾಗದಲ್ಲಿ ರೋಗಿಗಳ ಸಂಬಂಧಿಕರು, ಸಾರ್ವಜನಿಕರು ಕುಳಿತುಕೊಳ್ಳುವ ಸ್ಥಳದಲ್ಲಿ ಸೋಂಕಿತರಿಗೆ ಬಳಸಲಾಗುವ ತ್ಯಾಜ್ಯ ವಸ್ತುಗಳನ್ನು ಹಾಗೂ ಪಾರ್ಸಲ್ ತಂದಿರುವ ಊಟದ ತಟ್ಟೆಗಳು, ಪ್ಲಾಸ್ಟಿಕ್ ಸೇರಿದಂತೆ ಇತರ ವಸ್ತುಗಳನ್ನು ಎಸೆಯಲಾಗಿದ್ದು, ನಿನ್ನೆಯಿಂದ ಈವರೆಗೂ ಯಾರೊಬ್ಬರೂ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿಲ್ಲ.
ಇತ್ತ ಆಸ್ಪತ್ರೆಗೆ ಆಗಮಿಸುವ ರೋಗಿಗಳ ಸಂಬಂಧಿಕರು ಅದರ ಪರಿವೇ ಇಲ್ಲದೆ ತ್ಯಾಜ್ಯ ವಸ್ತುಗಳ ಪಕ್ಕದಲ್ಲೇ ಕುಳಿತು ಊಟ ಮಾಡುತ್ತಿದ್ದಾರೆ. ಹೀಗಾಗಿ ಬೀಮ್ಸ್ ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಜನನಿಬಿಡ ಪ್ರದೇಶದಲ್ಲಿರುವ ತ್ಯಾಜ್ಯ ವಸ್ತುಗಳನ್ನು ಪ್ರತಿದಿನ ಸ್ವಚ್ಛ ಗೊಳಿಸುವ ಕೆಲಸ ಮಾಡಬೇಕು ಎಂಬುದು ಎಲ್ಲರ ಒತ್ತಾಸೆ.