ಕರ್ನಾಟಕ

karnataka

ETV Bharat / city

ಗೋಡೆ ಕುಸಿತ ಪ್ರಕರಣ: ಬಡಾಲ ಅಂಕಲಗಿ ಗ್ರಾಮದಲ್ಲಿ ಸ್ಮಶಾನ ಮೌನ - ಬಡಾಲ ಅಂಕಲಗಿ ಗ್ರಾಮದಲ್ಲಿ ಸ್ಮಶಾನ ಮೌನ

ನಾಡಹಬ್ಬ ದಸರಾಗೆ ಸಿದ್ಧತೆಯಲ್ಲಿದ್ದ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲೀಗ ಸ್ಮಶಾನ ಮೌನ ಆವರಿಸಿದೆ.

Belgavi
ಗೋಡೆ ಕುಸಿದ ದುರಂತ

By

Published : Oct 7, 2021, 5:19 PM IST

ಬೆಳಗಾವಿ:ಮಳೆಯಿಂದ ಗೋಡೆ ಕುಸಿದು 7 ಜನರು ದುರ್ಮರಣ ಹೊಂದಿದ ಪ್ರಕರಣದಿಂದ ನಾಡಹಬ್ಬ ದಸರಾಗೆ ಸಿದ್ಧತೆಯಲ್ಲಿದ್ದ ಗ್ರಾಮದಲ್ಲೀಗ ನೀರವ ಮೌನ ಆವರಿಸಿದೆ.

ಜಿಲ್ಲೆಯ ಬಡಾಲ ಅಂಕಲಗಿ ಗ್ರಾಮದ ರಸ್ತೆಗಳೆಲ್ಲವೂ ಬೀಕೋ ಎನ್ನುತ್ತಿವೆ. ನಿನ್ನೆ (ಬುಧವಾರ) ರಾತ್ರಿ ಮನೆ ಗೋಡೆ ಕುಸಿದು ಒಂದೇ ಕುಟುಂಬದ ಆರು ಜನ ಮತ್ತು ಪಕ್ಕದ ಮನೆಯ ಓರ್ವ ಬಾಲಕಿ ಸಾವನ್ನಪ್ಪಿದ್ದರು.

ಬಡಾಲ ಅಂಕಲಗಿ ಗ್ರಾಮದಲ್ಲಿ ಸ್ಮಶಾನ ಮೌನ..

ಅರ್ಜುನ್ ಖನಗಾವಿ, ಗಂಗವ್ವ ಖನಗಾವಿ, ಸತ್ತೆವ್ವ ಖನಗಾವಿ, ಪೂಜಾ ಖನಗಾವಿ, ಸವಿತಾ ಖನಗಾವಿ, ಲಕ್ಷ್ಮೀ ಖನಗಾವಿ ಪಕ್ಕದ ಮನೆಯ 8 ವರ್ಷದ ಕಾಶವ್ವ ಕೊಳೆಪ್ಪನವರ್ ಮೃತರು. ತಡರಾತ್ರಿ ಗ್ರಾಮದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ದುರ್ಘಟನೆಯಿಂದ ಇಡೀ ಗ್ರಾಮವೇ ಮಮ್ಮಲ ಮರಗುತ್ತಿದೆ.

ಮೊಮ್ಮಗಳನ್ನು ನೆನೆದು ಕಣ್ಣೀರಿಟ್ಟ ಅಜ್ಜಿ:

ಬಡಾಲ ಅಂಕಲಗಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಏಳು ಜನ ಮೃತಪಟ್ಟ ಪ್ರಕರಣದಲ್ಲಿ ಪಕ್ಕದ ಮನೆಯ ಕಾಶವ್ವ ಕೂಡ ಗೋಡೆ ಕುಸಿತದಲ್ಲಿ ಮೃತಪಟ್ಟಿದ್ದಾಳೆ. ಮೃತ ಕಾಶವ್ವನ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೊಮ್ಮಗಳನ್ನ ನೆನೆದು ಅಜ್ಜಿ ಕಣ್ಣೀರಿಡುತ್ತಿದ್ದಾರೆ.

ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಮೂರು ದಿ‌ನ ಕಾರ್ಯವನ್ನು ಎರಡೇ ದಿನಕ್ಕೆ ಕುಟುಂಬಸ್ಥರು ನೆರವೇರಿಸಿದರು. ಅಂತ್ಯಕ್ರಿಯೆ ನೆರವೇರಿಸಿದ ಸ್ಥಳಕ್ಕೆ ತೆರಳಿದ ಕುಟುಂಬಸ್ಥರು ಕೊನೆಯ ಸಂಪ್ರದಾಯ ಪೂರೈಸಿದರು. ಈ ವೇಳೆ ಮೃತರನ್ನು ನೆನೆದು ಖನಗಾವಿ ಕುಟುಂಬದ ಸಂಬಂಧಿಕರು ಕಣ್ಣೀರಿಟ್ಟರು.

ಇದನ್ನೂ ಓದಿ:ಮನೆ ಗೋಡೆ ಕುಸಿತ ಪ್ರಕರಣ: ಒಂದೇ ಕುಟುಂಬದ 6 ಜನ ಮೃತ, ಇಬ್ಬರು ಬಚಾವ್ ಆಗಿದ್ದೇಗೆ?

ABOUT THE AUTHOR

...view details