ಕರ್ನಾಟಕ

karnataka

ETV Bharat / city

ಸಹಕಾರ ರಂಗದಲ್ಲಿ ರಾಜಕಾರಣ, ಪಕ್ಷದ ಹಸ್ತಕ್ಷೇಪ ಇರಬಾರದು : ಪವನ್ ಕತ್ತಿ - Vote for the position of Director of the Taluk Agricultural Growth Sales Cooperative Society

ಈ ಹಿಂದೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಶೋಕ ಅವಕ್ಕನವರ ಅವಿರೋಧವಾಗಿ ಆಯ್ಕೆ ಆಗಿದ್ದರು. ಅವರ ಅಕಾಲಿಕ ನಿಧನದಿಂದ ಈಗ ಚುನಾವಣೆ ಎದುರಾಗಿದೆ. ಈಗ ಅವಿರೋಧ ಆಯ್ಕೆ ಸಾಧ್ಯವಾಗದಿರುವುದಕ್ಕೆ ಚುನಾವಣೆ ನಡೆಸಲಾಗುತ್ತಿದೆ..

vote-for-the-position-of-director-of-the-taluk-agricultural-growth-sales-cooperative-society
ಸಹಕಾರ ರಂಗದಲ್ಲಿ ರಾಜಕಾರಣ, ಪಕ್ಷ ಬರಬಾರದು : ಪವನ್ ಕತ್ತಿ

By

Published : Mar 26, 2022, 4:46 PM IST

ಬೆಳಗಾವಿ :ಸಹಕಾರ ರಂಗದಲ್ಲಿ ರಾಜಕಾರಣ ಮತ್ತು ಯಾವುದೇ ಪಕ್ಷದ ಹಸ್ತಕ್ಷೇಪ ಇರಬಾರದು ಎಂದು ಜಿಪಂ‌ ಮಾಜಿ ಸದಸ್ಯ ಪವನ್ ಕತ್ತಿ ಹೇಳಿದ್ದಾರೆ. ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಡೆದ ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಮೇಶ ಕತ್ತಿ, ಲಕ್ಷ್ಮಣ ಸವದಿ, ಪ್ರಭಾಕರ ಕೋರೆ ನಮ್ಮ ನಾಯಕರು. ನಮ್ಮ ನಾಯಕರು ಸಂಜು ಅವಕ್ಕನವರ ಅವರನ್ನು ಒಮ್ಮತದಿಂದ ನಿರ್ದೇಶಕ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿಸಿ ಕಣಕ್ಕಿಳಿಸಿದ್ದಾರೆ ಎಂದು ಹೇಳಿದ್ದಾರೆ.

ಈ ಹಿಂದೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಶೋಕ ಅವಕ್ಕನವರ ಅವಿರೋಧವಾಗಿ ಆಯ್ಕೆ ಆಗಿದ್ದರು. ಅವರ ಅಕಾಲಿಕ ನಿಧನದಿಂದ ಈಗ ಚುನಾವಣೆ ಎದುರಾಗಿದೆ. ಈಗ ಅವಿರೋಧ ಆಯ್ಕೆ ಸಾಧ್ಯವಾಗದಿರುವುದಕ್ಕೆ ಚುನಾವಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಜಿಲ್ಲೆಯ ಬಿಜೆಪಿ ನಾಯಕರಲ್ಲಿ ಯಾವುದೇ ಭಿನ್ನಮತ ಇಲ್ಲ. ನಮ್ಮ ನಡುವೆ ಯಾವುದೇ ಬಣ ಇಲ್ಲ. ನಾವೆಲ್ಲರೂ ಒಂದೇ ಎಂದು ಇದೇ ವೇಳೆ ಹೇಳಿದ್ದಾರೆ.

ಮತದಾನ ಮುಕ್ತಾಯ : ತಾಲೂಕು ಕೃಷಿ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆ ಜಿಲ್ಲೆಯ ಬಿಜೆಪಿ ನಾಯಕರ ಪ್ರತಿಷ್ಠೆಗೆ ಕಾರಣವಾಗಿದೆ. ಸಚಿವ ಉಮೇಶ್ ಕತ್ತಿ,‌ ಲಕ್ಷ್ಮಣ ಸವದಿ, ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಡಾ. ಪ್ರಭಾಕರ ಕೋರೆ ಬಣದಿಂದ ಸಂಜಯ್ ಅವಕ್ಕನವರ ಕಣಕ್ಕಿಳಿದಿದ್ದಾರೆ. ಇನ್ನೂ ಜಾರಕಿಹೊಳಿ‌ ಬ್ರದರ್ಸ್ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಖಾನಾಪುರ ಬಿಜೆಪಿ ಮುಖಂಡ ಅರವಿಂದ ಪಾಟೀಲ ಮತ್ತು ಅಭ್ಯರ್ಥಿ ಸಂಜಯ್ ಅವಕ್ಕನವರ ಜೊತೆಗೆ ಆಗಿಮಿಸಿದ ಆರು ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಓದಿ :ನನ್ಗೆ ಸ್ವಾಮೀಜಿಗಳ ಮೇಲೆ ಗೌರವವಿದೆ, ನೀವ್‌ ಯಾವ್ದ್‌ ಯಾವ್ದಕ್ಕೋ ಲಿಂಕ್‌ ಮಾಡ್ಬೇಡಿ.. ಮಾಧ್ಯಮದವರ ಮೇಲೆ ಸಿದ್ದು ಗರಂ

ABOUT THE AUTHOR

...view details