ಬೆಳಗಾವಿ:ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಬೆಳಗಾವಿ ಹಿಂಡಲಗಾ ಜೈಲಿಗೆ ಕರೆತರಲಾಯಿತು.
ಹಿಂಡಲಗಾ ಜೈಲಿಗೆ ವಿನಯ್ ಕುಲಕರ್ಣಿ ಶಿಫ್ಟ್: ಕ್ವಾರಂಟೈನ್ ಸೆಲ್ನಲ್ಲಿ ಮಾಜಿ ಸಚಿವ - ಹಿಂಡಲಗಾ ಜೈಲಿಗೆ ವಿನಯ್ ಕುಲಕರ್ಣಿ ರವಾನೆ
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಬೆಳಗಾವಿ ಹಿಂಡಲಗಾ ಜೈಲಿಗೆ ಕರೆತರಲಾಯಿತು. ಜೈಲಿನಲ್ಲಿರುವ ಕ್ವಾರಂಟೈನ್ ಕೇಂದ್ರದ ಕೊಠಡಿಯಲ್ಲಿ ವಿನಯ್ ಕುಲಕರ್ಣಿ ಈ ರಾತ್ರಿ ಕಳೆಯಲಿದ್ದಾರೆ.
ಸಿಬಿಐ ಅಧಿಕಾರಿಗಳು ಹಾಗೂ ಧಾರವಾಡ ಉಪನಗರ ಠಾಣೆ ಪೊಲೀಸರು ವಿನಯ್ ಕುಲಕರ್ಣಿ ಅವರನ್ನು ಕರೆತಂದರು. ಇಂದು ಬೆಳಗ್ಗೆಯಿಂದ ಸಿಬಿಐ ವಶದಲ್ಲಿದ್ದ ವಿನಯ್ ಕುಲಕರ್ಣಿಯನ್ನು ಧಾರವಾಡದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ವಿನಯ್ ಕುಲಕರ್ಣಿ ಅವರಿಗೆ ಒಂದು ದಿನದ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿತ್ತು.
ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಧಾರವಾಡದಿಂದ ಬೆಳಗಾವಿ ಹಿಂಡಲಗಾ ಜೈಲಿಗೆ ಕರೆತಂದಿದ್ದಾರೆ. ಜೈಲು ಸಿಬ್ಬಂದಿಗೆ ಸಿಬಿಐ ಅಧಿಕಾರಿಗಳು ಕೋರ್ಟ್ ವಾರೆಂಟ್ ಹಾಜರುಪಡಿಸಿ, ವಿನಯ್ ಕುಲಕರ್ಣಿ ಅವರನ್ನು ಹಸ್ತಾಂತರಿಸಿದರು. ಜೈಲಿನಲ್ಲಿರುವ ಕ್ವಾರಂಟೈನ್ ಕೇಂದ್ರದ ಕೊಠಡಿಯಲ್ಲಿ ವಿನಯ್ ಕುಲಕರ್ಣಿ ಈ ರಾತ್ರಿ ಕಳೆಯಲಿದ್ದಾರೆ.