ಬೆಳಗಾವಿ: ಅದೆಷ್ಟೋ ಮಂದಿ ಸರ್ಕಾರಿ ನೌಕರಿಗಾಗಿ ಪರದಾಡುತ್ತಿದ್ದಾರೆ. ಆದರೆ, ಇಲ್ಲೊಬ್ಬ ಸರ್ಕಾರಿ ನೌಕರ ತನ್ನ ಕೆಲಸಕ್ಕೆ ಮರ್ಯಾದೆ ಕೊಡದೆ ರಂಪಾಟ ಮಾಡಿದ್ದಾನೆ. ಕರ್ತವ್ಯ ವೇಳೆ ಕಂಠಪೂರ್ತಿ ಕುಡಿದು ಅಡ್ಡಲಾಗಿ ಮಲಗಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ತಹಶೀಲ್ದಾರ್ ಕಚೇರಿ ಎದುರು ನಡೆದಿದೆ.
ಸಂಜು ಬೆಣ್ಣಿ ಕಂಠಪೂರ್ತಿ ಕುಡಿದು ಮಲಗಿರುವ ಗ್ರಾಮಲೆಕ್ಕಾಧಿಕಾರಿ. ಈ ಮೊದಲು ಸಂಜು ಬೆಣ್ಣಿ ಸವದತ್ತಿ ತಾಲೂಕಿನ ಗೊರವನಕೊಳ್ಳ ಗ್ರಾಮದಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ ಕೆಲಸಕ್ಕಿದ್ದ. ಅಲ್ಲಿಯೂ ಕರ್ತವ್ಯದ ವೇಳೆ ಕಂಠಪೂರ್ತಿ ಕುಡಿಯುತ್ತಿದ್ದ ಹಿನ್ನೆಲೆ ಸವದತ್ತಿ ತಹಶೀಲ್ದಾರ್ ಕಚೇರಿಗೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.