ಬೆಳಗಾವಿ:ವೀಕೆಂಡ್ ಕರ್ಫ್ಯೂ ಹಿನ್ನೆಲೆ ರಾತ್ರಿಯೂ ಡಿಸಿಪಿ ಯಶೋಧಾ ವಂಟಗೋಡಿ ಸಿಟಿ ರೌಂಡ್ಸ್ ಮಾಡುತ್ತಿದ್ದು, ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ ನಗರದ ಚೆನ್ನಮ್ಮ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮೆಡಿಕಲ್ ಶಾಪ್ ಚೀಟಿ, ಆಸ್ಪತ್ರೆ ದಾಖಲೆ, ಕಾರ್ಮಿಕರ ಐಡಿ ಕಾರ್ಡ್ ತೋರಿಸಿ ಹಾಗೂ ಬಹುತೇಕ ಆನ್‌ಲೈನ್ ಫುಡ್ ಡೆಲಿವರಿ ಬಾಯ್ಸ್ ಓಡಾಟ ನಡೆಸುತ್ತಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಪಿ ಯಶೋಧಾ ವಂಟಗೋಡಿ, ಹಲವು ಕ್ಷೇತ್ರಗಳಿಗೆ ವಿನಾಯಿತಿ ನೀಡಿರೋದ್ರಿಂದ ಜನರ ಓಡಾಟ ಇದೆ. ಶೇಕಡಾ 90ರಷ್ಟು ಜನ ಎಕ್ಸೆಂಪ್ಷನ್ ಇದ್ದವರೇ ಓಡಾಟ ನಡೆಸುತ್ತಿದ್ದಾರೆ.
ದೂರದ ಏರಿಯಾಗಳಿಂದ ನಗರ ಪ್ರದೇಶದ ಮೆಡಿಕಲ್ ಶಾಪ್ಗೆ ಬರೋ ಅಗತ್ಯ ಏನಿದೆ? ನಿಮಗೆ ಹತ್ತಿರ ಇರುವ ಮೆಡಿಕಲ್ ಶಾಪ್‌ಗಳಿಗೆ ಹೋಗಿ, ಅನವಶ್ಯಕವಾಗಿ ರಸ್ತೆಗಿಳಿಯಬೇಡಿ ಎಂದು ಮನವಿ ಮಾಡಿಕೊಂಡರು.
ಕಳೆದ ಬಾರಿ ಲಾಕ್‌ಡೌನ್ ವೇಳೆ ಕಂಪ್ಲೀಟ್ ಎಲ್ಲಾ ಬಂದ್ ಇತ್ತು. ಆದರೆ ಈಗ ಕೆಲ ಕ್ಷೇತ್ರಗಳಿಗೆ ವಿನಾಯಿತಿ ಹಿನ್ನೆಲೆ ಜನ ಓಡಾಡುತ್ತಿದ್ದಾರೆ. ಬೆಳಗಾವಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಇಂದು ಯಾವುದೇ ವಾಹನ ಸೀಜ್ ಮಾಡಿಲ್ಲ. ಅನಗತ್ಯವಾಗಿ ನಾಳೆ ರಸ್ತೆಗಿಳಿದ್ರೆ ವಾಹನಗಳನ್ನು ಸೀಜ್ ಮಾಡ್ತೇವೆ. ಜನರ ಮೇಲೆ ಬಲಪ್ರಯೋಗ ಮಾಡ್ತಿಲ್ಲ, ತಿಳಿವಳಿಕೆ ನೀಡ್ತಿದೀವಿ. ಜನರು ಸಹಕರಿಸಿ ಅನಗತ್ಯವಾಗಿ ಯಾರೂ ರಸ್ತೆಗಿಳಿಯಬೇಡಿ ಎಂದರು.