ಬೆಳಗಾವಿ :ಮರಾಠಿ ಹಾಗೂ ಮರಾಠ ಪದಗಳ ಮಧ್ಯೆ ವ್ಯತ್ಯಾಸವಿದೆ. ರಾಜ್ಯದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ತಪ್ಪಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ವಿರೋಧಿಸಿ ಕರವೇ ಬಂದ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅನಗತ್ಯವಾಗಿ ಬಂದ್ಗೆ ಕರೆ ನೀಡೋದು ತಪ್ಪು. ಮರಾಠಿ ಸಮುದಾಯವರು ಅನೇಕ ವರ್ಷಗಳಿಂದ ಇಲ್ಲೇ ಇದ್ದಾರೆ. ಮರಾಠಿ ಹಾಗೂ ಮರಾಠ ಪದಗಳ ಮಧ್ಯೆ ವ್ಯತ್ಯಾಸವಿದೆ. ಅವರಿಗಾಗಿ ಒಂದು ಪ್ರಾಧಿಕಾರ ಸ್ಫಾಪನೆ ಮಾಡಿದ್ದು ತಪ್ಪಲ್ಲ.
ಹೋರಾಟಗಾರರ ಬಗ್ಗೆ ನಮಗೆ ಗೌರವವಿದೆ. ಕನ್ನಡ ಭಾಷೆಗೆ ನಮ್ಮ ಮೊದಲ ಆದ್ಯತೆ ಎಂದರು. ನಿನ್ನೆಯ ಕೋರ್ ಕಮಿಟಿ ಸಭೆಯಲ್ಲಿ ಹಲವು ವಿಚಾರಗಳನ್ನ ಚರ್ಚೆ ಮಾಡಿದ್ದೇವೆ. ಗ್ರಾಪಂ ಚುನಾವಣೆ ತಯಾರಿ ಹಾಗೂ ಪ್ರತಿ ಜಿಲ್ಲೆಯ ಒಬ್ಬರಿಗೆ ಉಸ್ತುವಾರಿ ನೀಡುವ ಬಗ್ಗೆ ಚರ್ಚಿಸಿದ್ದೇವೆ. ಉಪಚುನಾವಣೆ ತಯಾರಿ, ಉಸ್ತುವಾರಿ, ತಂತ್ರಗಾರಿಕೆ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ.
ಸಭೆಯಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಿಲ್ಲ. ಸಭೆ ನಂತರ ಅರುಣ್ ಸಿಂಗ್ ಹಾಗೂ ಸಿಎಂ ಚರ್ಚೆ ಮಾಡಿದ ಬಗ್ಗೆ ನನಗೆ ಮಾಹಿತಿಯಿಲ್ಲ. ರಾಜ್ಯ ಉಸ್ತುವಾರಿ, ರಾಷ್ಟ್ರೀಯ ನಾಯಕರು ಮತ್ತು ಸಿಎಂ ಚರ್ಚೆ ಮಾಡಿ ಸಂಪುಟ ವಿಸ್ತರಣೆ ಮಾಡುತ್ತಾರೆ ಎಂದರು.