ಬೆಳಗಾವಿ: ಮಸಾಜ್ ಸೆಂಟರ್ ಹೆಸರಿನಲ್ಲಿ ಅಮಾಯಕ ಹೆಣ್ಣು ಮಕ್ಕಳನ್ನು ಅನೈತಿಕ ಚಟುವಟಿಕೆ ಬಳಸಿಕೊಳ್ಳುತ್ತಿದ್ದ ಘಟನೆ ನಗರದಲ್ಲಿ ನಡೆದಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಮೂವರು ಯುವತಿಯರನ್ನು ರಕ್ಷಿಸಿದ್ದಾರೆ.
ನಗರದ ಮರಗಾಯಿ ಗಲ್ಲಿಯ ವಿನಾಯಕ ಶಿಂಧೆ (37) ಹಾಗೂ ಟಿಳಕವಾಡಿಯ ಮರಾಠಾ ಕಾಲೋನಿಯ ಪ್ರಕಾಶ ಯಳ್ಳೂಕರ್ (27)ಬಂಧಿತ ಆರೋಪಿಗಳು. ಆರೋಪಿಗಳು ನಗರದ ಟಿಳಕವಾಡಿ ಕಾಂಗ್ರೆಸ್ ರಸ್ತೆಯಲ್ಲಿರುವ ನೆಲ್ಸನ್ ಹೈಟ್ಸ್ ಅಪಾರ್ಟಮೆಂಟ್ನಲ್ಲಿ 'ನ್ಯೂ ಗೇಟ್‌ವೇ ಯೂನಿಸೆಕ್ಸ್ 'ಸ್ಪಾ' ಎಂಬ ಹೆಸರಿನ ಮಸಾಜ್ ಸೆಂಟರ್ ಇಟ್ಟುಕೊಂಡು ಅನೈತಿಕ ಚಟುವಟಿಕೆ ನಡೆಸುತ್ತಿದ್ದರು ಎನ್ನಲಾಗಿದೆ.