ಕರ್ನಾಟಕ

karnataka

ETV Bharat / city

ಹೆಂಡ್ತಿಯರಾಗಿ ನಾವಿಲ್ವಾ, ನಿಮ್‌ ಜನ್ಮಕ್ಕಿಷ್ಟು.. ನಿಮ್ಗೇ ಅವ್ರೇ ಬೇಕಾ.. ಗಂಡಂದಿರಿಗೆ ಧರ್ಮದೇಟು! - ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ತಮ್ಮ ಗಂಡಂದಿರು ಬೇರೆ ಮಹಿಳೆಯರೊಂದಿಗೆ ಏಕಾಂತದ ಕ್ಷಣಗಳಲ್ಲಿ ಮೈಮರೆತಿದ್ದಾಗ ಸ್ಥಳಕ್ಕೆ ಧಾವಿಸಿದ್ದ ಪತ್ನಿಯರು ಸ್ಥಳೀಯರ ಜತೆಗೆ ಸೇರಿ ಧರ್ಮದೇಟು ನೀಡಿದ್ದಾರೆ. ಈ ಜೋಡಿಗಳಿಗೆ ಆಳಿಗೊಬ್ಬರು ಏಟು ಕೊಟ್ಟು ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ.

KN_CKD_1_staliyarinda_gusa_script_KA10023
ಅಕ್ರಮ ಸಂಬಂಧ, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಜೋಡಿಗಳಿಗೆ ಸಾರ್ವಜನಿಕರಿಂದ ಧರ್ಮದೇಟು....!

By

Published : Jan 22, 2020, 1:49 PM IST

Updated : Jan 22, 2020, 4:31 PM IST

ಚಿಕ್ಕೋಡಿ: ತಮ್ಮ ಗಂಡಂದಿರು ಬೇರೆ ಮಹಿಳೆಯರೊಂದಿಗೆ ಏಕಾಂತದ ಕ್ಷಣಗಳಲ್ಲಿ ಮೈಮರೆತಿದ್ದಾಗ ಸ್ಥಳಕ್ಕೆ ಧಾವಿಸಿದ್ದ ಪತ್ನಿಯರು ಸ್ಥಳೀಯರ ಜತೆಗೆ ಸೇರಿ ಧರ್ಮದೇಟು ನೀಡಿದ್ದಾರೆ. ಈ ಜೋಡಿಗಳಿಗೆ ಆಳಿಗೊಬ್ಬರು ಏಟು ಕೊಟ್ಟು ಹಣ್ಣುಗಾಯಿ ನೀರುಗಾಯಿ ಮಾಡಿರೋ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

ಹೆಂಡ್ತಿಯರಾಗಿ ನಾವಿಲ್ವೇನ್ರೋ.. ನಿಮ್‌ ಜನ್ಮಕ್ಕೇ..

ಹುಕ್ಕೇರಿ ತಾಲೂಕಿನ ಹಂಜಾನಟ್ಟಿ ಹಾಗೂ ಮಸರಗುಪ್ಪಿ ಗ್ರಾಮಗಳ ಯುವಕರು ಮಹಿಳೆಯರ ಜೊತೆ ಅನೈತಿಕ ಸಂಬಂಧ ಹೊಂದಿದ್ದರು. ಮನೆಯಲ್ಲಿ ಏಕಾಂತವಾಗಿದ್ದ ಸಂದರ್ಭ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಪರಿಣಾಮ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಗಂಡಂದಿರಿಗೆ ಪತ್ನಿಯರು, ಕುಟುಂಬಸ್ಥರು ಹಾಗೂ ಸ್ಥಳೀಯರೇ ಧರ್ಮದೇಟು ನೀಡಿದ್ದಾರೆ. ಈ ಸಂಬಂಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jan 22, 2020, 4:31 PM IST

ABOUT THE AUTHOR

...view details