ಕರ್ನಾಟಕ

karnataka

ETV Bharat / city

ಮಟ್ಕಾ ಬುಕ್ಕಿಯಿಂದ ಲಂಚ ಪಡೆದ ಪ್ರಕರಣ; ಬೆಳಗಾವಿಯ ಇಬ್ಬರು ಪೊಲೀಸ್ ಸಿಬ್ಬಂದಿ ‌ಅಮಾನತು!

ಮಟ್ಕಾ ಬುಕ್ಕಿಯಿಂದ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಸಿಬ್ಬಂದಿ ‌ಅಮಾನತುಗೊಳಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

two police staff Suspend in Belgaum, two police staff Suspend for Bribery case, police staff Suspend for Bribery case in Belgaum, Belagavi crime news, ಬೆಳಗಾವಿಯ ಇಬ್ಬರು ಪೊಲೀಸ್ ಸಿಬ್ಬಂದಿ ‌ಅಮಾನತು, ಲಂಚ ಪ್ರಕರಣ ಸಂಬಂಧ  ಇಬ್ಬರು ಪೊಲೀಸ್ ಸಿಬ್ಬಂದಿ ‌ಸಸ್ಪೆಂಡ್, ಬೆಳಗಾವಿಯಲ್ಲಿ ಲಂಚ ಪ್ರಕರಣದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ‌ಸಸ್ಪೆಂಡ್, ಬೆಳಗಾವಿ ಅಪರಾಧ ಸುದ್ದಿ,
ಬೆಳಗಾವಿಯ ಇಬ್ಬರು ಪೊಲೀಸ್ ಸಿಬ್ಬಂದಿ ‌ಅಮಾನತು

By

Published : Feb 2, 2022, 8:00 AM IST

ಬೆಳಗಾವಿ: ಮಟ್ಕಾ ಬುಕ್ಕಿಯಿಂದ ಒಂದು ಲಕ್ಷ ರೂ. ಲಂಚ ಪಡೆದ ಆರೋಪದಡಿ ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು ಮಾಡಿ ಬೆಳಗಾವಿ ಪೊಲೀಸ್ ಕಮೀಷನರ್ ಡಾ. ಬೋರಲಿಂಗಯ್ಯ ಆದೇಶ ಹೊರಡಿಸಿದ್ದಾರೆ.

ಖಡೇಬಜಾರ್ ಠಾಣೆ ಎಎಸ್‌ಐ ದಶರಥ ಹತ್ತಿಕರ ಹಾಗೂ ಎಸಿಪಿ ಕ್ರೈಂ ವಿಭಾಗದ ಹೆಡ್ ಕಾನ್ಸಟೇಬಲ್ ಶಂಕರ ಪಾಟೀಲ‌ ಅಮಾನತ್ತಾಗಿರುವ ಸಿಬ್ಬಂದಿ. ನಗರದಲ್ಲಿ ಮಟ್ಕಾ ಹಾಗೂ ಜೂಜಾಟ ಎಗ್ಗಿಲ್ಲದೇ ನಡೆಯುತ್ತಿದ್ದು, ಈ ಇಬ್ಬರು ಪೊಲೀಸ್ ಸಿಬ್ಬಂದಿ ಇದಕ್ಕೆ ಸಹಕಾರ ನೀಡುತ್ತಿದ್ದ ಆರೋಪಕ್ಕೆ ಗುರಿಯಾಗಿದ್ದಾರೆ.

ಓದಿ:ಹಾಟ್​ ವಿಡಿಯೋ ಹಂಚಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಬಾಲಿವುಡ್​ ನಟಿ

ಸೋಮವಾರ ಮಟ್ಕಾ, ಓಸಿ ಬುಕ್ಕಿಯಿಂದ ಪೊಲೀಸ್​ ಸಿಬ್ಬಂದಿಯಿಬ್ಬರೂ ಸೇರಿ ಲಕ್ಷ ರೂ. ಲಂಚ ಪಡೆದಿದ್ದರು. ಈ ಬಗ್ಗೆ ಮಾಹಿತಿ ಪಡೆದುಕೊಂಡ ಪೊಲೀಸ್ ಕಮೀಷನರ್ ಬೋರಲಿಂಗಯ್ಯ, ಇಬ್ಬರನ್ನೂ ಕರೆಯಿಸಿ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಹೀಗಾಗಿ ಈ ಇಬ್ಬರನ್ನೂ ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details