ಕರ್ನಾಟಕ

karnataka

ETV Bharat / city

ಚಿಕ್ಕೋಡಿ ಉಪವಿಭಾಗದಲ್ಲಿ ಮತ್ತೆರಡು ಕೆಳಹಂತದ ಸೇತುವೆ ಮುಳುಗಡೆ - Heavy rain in Maharashtra and Belgavi

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಚಿಕ್ಕೋಡಿಯಲ್ಲಿ ಸೇತುವೆಗಳು ಜಲಾವೃತವಾಗಿವೆ. ಸಾರ್ವಜನಿಕರು ನದಿಪಾತ್ರಕ್ಕೆ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

Two more low-level bridges in Chikkodi sub-division were submerged
ಚಿಕ್ಕೋಡಿ ಉಪವಿಭಾಗದಲ್ಲಿ ಮತ್ತೆರಡು ಕೆಳಹಂತದ ಸೇತುವೆಗಳು ಮುಳುಗಡೆ

By

Published : Jul 10, 2022, 12:48 PM IST

ಬೆಳಗಾವಿ: ಕಳೆದೊಂದು ವಾರದಿಂದ ಮಹಾರಾಷ್ಟ್ರ‌ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ, ಚಿಕ್ಕೋಡಿ ಉಪವಿಭಾಗದಲ್ಲಿರುವ ನಿಪ್ಪಾಣಿ ತಾಲೂಕಿನ ಜತ್ರಾಟ-ಭೀವಶಿ‌ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಹಾಗೂ ಕೃಷ್ಣಾ ನದಿಗೆ ಅಡ್ಡಲಾಗಿರುವ ಮಾಂಜರಿ-ಭಾವನ‌ಸೌಂದತ್ತಿ ಸೇತುವೆ ಪ್ರವಾಹ ನೀರಿನಲ್ಲಿ ಮುಳುಗಿವೆ.


ಸೇತುವೆ ಮೇಲೆ ಯಾರೂ ಓಡಾಡದಂತೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಎಚ್ಚರಿಕೆ ನೀಡಿದ್ದಾರೆ. ಚಿಕ್ಕೋಡಿ ಉಪವಿಭಾಗದಲ್ಲಿ ಈಗಾಗಲೇ ನಾಲ್ಕು ಕೆಳಹಂತದ ಸೇತುವೆ ಮುಳುಗಿವೆ. ಕೃಷ್ಣಾ, ಮಲಪ್ರಭಾ, ಘಟಪ್ರಭಾ, ದೂದಗಂಗಾ, ವೇದಗಂಗಾ ನದಿಗಳ ನೀರಿನ ಒಳಹರಿವು ಹೆಚ್ಚಳವಾಗಿದೆ. ಇಷ್ಟೆಲ್ಲಾ ಮಳೆಯಾಗುತ್ತಿದ್ದರೂ ಮಹಾರಾಷ್ಟ್ರ ಅಥವಾ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಜಲಾಶಯಗಳು ಅರ್ಧದಷ್ಟೂ ಭರ್ತಿ ಆಗಿಲ್ಲ.

ಇದನ್ನೂ ಓದಿ :ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿತ: ವಾಹನ ಸಂಚಾರ ಬಂದ್

ABOUT THE AUTHOR

...view details