ಬೆಳಗಾವಿ: ದೀಪಾವಳಿಯ ತ್ಯಾಜ್ಯ ಎಸೆಯಲು ಕೆರೆಗೆ ತೆರಳಿದ್ದ ಮೂವರು ಸಹೋದರಿಯರ ಪೈಕಿ ಇಬ್ಬರು ನೀರುಪಾಲಾಗಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ನಡೆದಿದೆ.
ಸಾಂಬ್ರಾ ನಿವಾಸಿಗಳಾದ ನೇತ್ರಾ ಕೊಳವಿ (8) ಹಾಗು ಪ್ರಿಯಾ ಕೊಳವಿ (6) ಮೃತ ಸಹೋದರಿಯರು. ಕಾಲು ಜಾರಿ ಕೆರೆಯಲ್ಲಿ ಬಿದ್ದಿದ್ದ ಮತ್ತೋರ್ವ ಬಾಲಕಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ದೀಪಾವಳಿ ಹಬ್ಬದಲ್ಲಿ ಬಳಸಿದ ಪೂಜಾ ಸಾಮಗ್ರಿಗಳನ್ನು ಕೆರೆಗೆ ವಿಸರ್ಜಿಸಲು ಹಿರಿಯ ಸಹೋದರಿ 10 ವರ್ಷದ ಸಂಧ್ಯಾ ಜತೆಗೆ ಈ ಇಬ್ಬರು ತೆರಳಿದ್ದರು. ಬಾಳೆ ಗಿಡ ಕೆರೆಗೆ ಎಸೆಯುವ ವೇಳೆ ಸಂಧ್ಯಾ, ನೇತ್ರಾ, ಹಾಗು ಪ್ರಿಯಾ ಮೂವರು ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ.
ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಸಂಧ್ಯಾಳನ್ನು ರಕ್ಷಿಸಿದ್ದಾರೆ. ಇನ್ನುಳಿದ ಇಬ್ಬರು ಬಾಲಕಿಯರ ಮೃತದೇಹವನ್ನು ಹೊರ ತೆಗೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ರಜೆಗಾಗಿ ಸೈನಿಕರ ನಡುವೆ ಗುಂಡಿನ ಚಕಮಕಿ: ನಾಲ್ವರು ಸಾವು, ಮೂವರ ಸ್ಥಿತಿ ಗಂಭೀರ