ಕರ್ನಾಟಕ

karnataka

ETV Bharat / city

Lockdown: ಇಂದಿನಿಂದ ಎರಡು ದಿನ ಕುಂದಾನಗರಿ ಸಂಪೂರ್ಣ ಸ್ತಬ್ಧ - Lockdown,

ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಘೋಷಿಸಿರುವ ವೀಕೆಂಡ್ ಲಾಕ್​ಡೌನ್​ಗೆ ಬೆಳಗಾವಿ ಜಿಲ್ಲೆಯಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂದಿನಿಂದ ಎರಡು ದಿನಗಳ ಕಾಲ ಕುಂದಾನಗರಿ ಬೆಳಗಾವಿ ಸಂಪೂರ್ಣ ಸ್ತಬ್ಧವಾಗಲಿದೆ.

belgaum
ಇಂದಿನಿಂದ ಎರಡು ದಿನ ಸಂಪೂರ್ಣ ಲಾಕ್​ಡೌನ್

By

Published : May 29, 2021, 10:04 AM IST

ಬೆಳಗಾವಿ: ಕೊರೊನಾ ‌ನಿಯಂತ್ರಿಸುವ ನಿಟ್ಟಿನಲ್ಲಿ ಇಂದಿನಿಂದ ಎರಡು ದಿನ ಜಿಲ್ಲಾಡಳಿತ ಸಂಪೂರ್ಣ ಲಾಕ್​ಡೌನ್ ಘೋಷಿಸಿದೆ. ಹೀಗಾಗಿ, ಕುಂದಾನಗರಿ ಸಂಪೂರ್ಣ ಸ್ತಬ್ಧಗೊಂಡಿದೆ.

ಇಂದಿನಿಂದ ಎರಡು ದಿನ ಸಂಪೂರ್ಣ ಲಾಕ್​ಡೌನ್

ಹಾಲು ಪೂರೈಕೆ ಹಾಗೂ ಮಾರಾಟ, ಔಷಧಿ ಖರೀದಿ, ವೈದ್ಯಕೀಯ ಸೇವೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದಂತೆ ದಿನಸಿ, ತರಕಾರಿ ಹಾಗೂ ಎಟಿಎಂ ಸೇವೆ ಎರಡು ದಿನ ಸಂಪೂರ್ಣ ಬಂದ್ ಆಗಿರಲಿದೆ. ವೀಕೆಂಡ್ ಲಾಕ್​ಡೌನ್​ಗೆ ಕುಂದಾನಗರಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರದ ಪ್ರಮುಖ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದ್ದು, ಅಗತ್ಯ ಸೇವೆಗಳನ್ನು ಪೂರೈಸುವ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಸುಖಾಸುಮ್ಮನೆ ಓಡಾಡುವ ವಾಹನಗಳ ಮೇಲೆ ಎಫ್ಐಆರ್ ದಾಖಲಿಸಿ, ಸೀಜ್ ಮಾಡಲಾಗುತ್ತಿದೆ. ಪ್ರಮುಖ ರಸ್ತೆಗಳಲ್ಲಿ ಪೊಲೀಸರು ನಿಯೋಜನೆಗೊಂಡಿದ್ದು, ಕುಂಟು ನೆಪ ಹೇಳಿ ಓಡಾಡುವವರನ್ನು ಮನೆಗೆ ಕಳಿಸಲಾಗುತ್ತಿದೆ.

ಇದನ್ನೂ ಓದಿ:ಹಣ ನೀಡದಿದ್ದಕ್ಕೆ ಪಾರ್ಶ್ವವಾಯು ಪೀಡಿತ ತಂದೆಯನ್ನ ಕೊಡಲಿಯಿಂದ ಹೊಡೆದು ಕೊಂದ ಮಗ!

ABOUT THE AUTHOR

...view details