ಕರ್ನಾಟಕ

karnataka

ETV Bharat / city

ಮಾವನಂಗಡಿ ನೋಡಲು ಹೋದ ಯುವಕರು ಶವವಾಗಿ ಪತ್ತೆಯಾದರು! - ಮುಖ್ಯಮಂತ್ರಿ ಪರಿಹಾರ ನಿಧಿ

ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕರಿಬ್ಬರ ಮೃತ ದೇಹಗಳನ್ನು ಇಂದು ಹೊರತೆಗೆಯಲಾಗಿದೆ.

two boys dies in chikkodi

By

Published : Aug 18, 2019, 3:27 PM IST

ಚಿಕ್ಕೋಡಿ:ಕೃಷ್ಣಾ ನದಿ ನೀರಿನ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ ಯುವಕರಿಬ್ಬರ ಮೃತದೇಹಗಳನ್ನು ಸತತ ಎರಡು ದಿನಗಳ ಕಾರ್ಯಾಚರಣೆಯ ಬಳಿಕ ಹೊರ ತೆಗೆಯಲಾಗಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕುಸನಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಾಯಬಾಗ ತಾಲೂಕಿನ ನಸಲಾಪುರ ಗ್ರಾಮದ ನಿವಾಸಿಗಳಾದ ಶಾಂತಿನಾಥ್ ಸಮಾಜ್ (22) ಲಕ್ಷ್ಮಣ ಸಮಾಜ್ (20) ಮೃತರು.

ಕುಸನಾಳ ಗ್ರಾಮದಲ್ಲಿದ್ದ ಶಾಂತಿನಾಥ ಮತ್ತು ಲಕ್ಷ್ಮಣ ಅವರ ಮಾವನ ಅಂಗಡಿ, ಪ್ರವಾಹಕ್ಕೆ ಸಿಲುಕಿ ಮುಳುಗಡೆಯಾಗಿತ್ತು. ನೀರು ಕಡಿಮೆಯಾದ ಹಿನ್ನೆಲೆಯಲ್ಲಿ ಅಂಗಡಿಯ ಪರಿಸ್ಥಿತಿ ನೋಡಲು ತೆರಳಿದ್ದಾರೆ. ಈ ವೇಳೆ ಕುಸನಾಳ ಬಳಿ ಕೃಷ್ಣಾ ನದಿಗೆ ಕಾಲು ಜಾರಿ ಬಿದ್ದಿದ್ದಾರೆ. ಸತತ ಎರಡು ದಿನಗಳ ಕಾರ್ಯಾಚರಣೆಯ ನಂತರ ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ.

ABOUT THE AUTHOR

...view details