ಕರ್ನಾಟಕ

karnataka

ETV Bharat / city

ಮಹಾರಾಷ್ಟ್ರದ ಆಸ್ಪತ್ರೆಗೆ ತೆರಳಲು ತೊಂದರೆ.. ಆಕ್ರೋಶ ಹೊರಹಾಕಿದ ಕನ್ನಡಿಗ - ಬೆಳಗಾವಿ ಗಲಭೆ ಹಿನ್ನೆಲೆ ಬಸ್​ ಸಂಚಾರ ವ್ಯತ್ಯಯ

ಬೆಳಗಾವಿ ಗಡಿ ಭಾಗದಲ್ಲಿ ಸರಿಯಾದ ಆಸ್ಪತ್ರೆಗಳು ಇಲ್ಲದೇ ಇರುವುದರಿಂದ ಮಹಾರಾಷ್ಟ್ರದ ಆಸ್ಪತ್ರೆಗೆ ತೆರಳಬೇಕಾದ ರಾಜ್ಯದ ಜನರಿಗೆ ತೊಂದರೆ ಉಂಟಾಗಿದೆ.

man outrage
ಆಕ್ರೋಶ ಹೊರಹಾಕಿದ ಕನ್ನಡಿಗ

By

Published : Dec 22, 2021, 7:14 PM IST

Updated : Dec 22, 2021, 7:53 PM IST

ಬೆಳಗಾವಿ:ಜಿಲ್ಲೆಯಗಡಿ ಭಾಗದಲ್ಲಿ ಸರಿಯಾದ ಆಸ್ಪತ್ರೆಗಳು ಇಲ್ಲದೇ ಇರುವುದರಿಂದ, ಮಹಾರಾಷ್ಟ್ರದ ಆಸ್ಪತ್ರೆಗೆ ತೆರಳಬೇಕಾದ ರಾಜ್ಯದ ಜನರಿಗೆ ತೊಂದರೆ ಉಂಟಾಗಿದ್ದು, ಜನರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಆಕ್ರೋಶ ಹೊರಹಾಕಿದ ಕನ್ನಡಿಗ

ಈ ವೇಳೆ ಮಾತನಾಡಿದ ಕನ್ನಡಿಗನೊಬ್ಬ, ದೊಡ್ಡವರು ಬಂದರೆ ಸೆಲ್ಯೂಟ್ ಹೊಡೆದು ಮಹಾರಾಷ್ಟ್ರ ಪ್ರವೇಶಕ್ಕೆ ಅವಕಾಶ ಕೊಡ್ತಾರೆ. ನಮ್ಮಂಥ ಬಡವರು ಬಂದರೆ ನಿಲ್ಲಿಸಿ ವಿಚಾರಣೆ ಮಾಡ್ತಾರೆ. ಇದೆಂಥಾ ಸರ್ಕಾರ?, ಇವರೆಂಥಾ ನಿಯಮ ಮಾಡ್ತಾರೆ? ಎಂದು ಬೆಳಗಾವಿ ಜಿಲ್ಲೆಯ ಕಾಗವಾಡ ಚೆಕ್‌ಪೊಸ್ಟ್ ಬಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ಯಾನ್ಸರ್ ರೋಗಿಯೊಬ್ಬ ಮೀರಜ್​ನಲ್ಲಿ ಅಡ್ಮಿಟ್ ಮಾಡಿದ್ದೇನೆ. ನಾನು ಅಲ್ಲಿಗೆ ಹೋಗಬೇಕಿದೆ. ಕೇವಲ 10 ಕಿ.ಮೀ ಪ್ರಯಾಣಕ್ಕೆ ಆಟೋದವರು ನೂರಾರು ರೂಪಾಯಿ ವಸೂಲಿ ಮಾಡ್ತಾರೆ. ನಮ್ಮಂಥವರು ಎಲ್ಲಿಗೆ ಹೋಗ್ಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ‌.

ಇದನ್ನೂ ಓದಿ: ಮಾಜಿ ಶಾಸಕ ಬಾಲಕೃಷ್ಣ ವಿರುದ್ಧ ಮಾಗಡಿ ಶಾಸಕ ಮಂಜುನಾಥ್​ 'ಭೂ ಕಬಳಿಕೆ' ಆರೋಪ

ಬಸ್ ಇಲ್ಲದೇ ಗಡಿಯಲ್ಲಿ ಪ್ರಯಾಣಿಕರ ಪರದಾಟ, ಬಸ್ ಸಿಗದೇ ರೋಗಿಗಳ ಬಳಿ ಹೋಗಲು ಆಗುತ್ತಿಲ್ಲ‌. ಇದೆಲ್ಲ ರಾಜಕಾರಣಿಗಳ ಕೈವಾಡ. ನಮ್ಮಂಥ ಬಡವರಿಗೆ ಮಾತ್ರ ಈ ಕಷ್ಟಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

Last Updated : Dec 22, 2021, 7:53 PM IST

ABOUT THE AUTHOR

...view details