ಬೆಳಗಾವಿ: ತ್ರಿವಳಿ ತಲಾಖ್ ನಿಷೇಧ ಕಾಯ್ದೆ ಜಾರಿಗೆ ಬಂದ ಬಳಿಕ ರಾಜ್ಯದಲ್ಲಿ ಮೊದಲ ಎಫ್ಐಆರ್ ಗಡಿ ಜಿಲ್ಲೆ ಬೆಳಗಾವಿಯ ಸವದತ್ತಿ ಠಾಣೆಯಲ್ಲಿ ದಾಖಲಾಗಿದೆ.
ತ್ರಿವಳಿ ತಲಾಖ್.. ಕುಂದಾನಗರಿಯಲ್ಲಿ ದಾಖಲಾಯ್ತು ರಾಜ್ಯದ ಮೊದಲ ಎಫ್ಐಆರ್! - ತ್ರಿವಳಿ ತಲಾಖ್ ನಿಷೇಧ ಕಾಯ್ದೆ
ತ್ರಿವಳಿ ತಲಾಖ್ ನಿಷೇಧ ಕಾಯ್ದೆ ಜಾರಿಗೆ ಬಂದ ಬಳಿಕ ರಾಜ್ಯದಲ್ಲಿ ಮೊದಲ ಎಫ್ಐಆರ್ ಗಡಿ ಜಿಲ್ಲೆ ಬೆಳಗಾವಿಯ ಸವದತ್ತಿ ಠಾಣೆಯಲ್ಲಿ ದಾಖಲಾಗಿದೆ.
ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದ ಬೀಬಿ ಆಯೀಶಾ ಎಂಬುವರು ಪತಿ ಇಸ್ಮಾಯಿಲ್ ಖಾನ್ ಪಠಾಣ್ ಕಾನೂನು ಬಾಹಿರವಾಗಿ ವಿಚ್ಛೇದನ ನೀಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ತ್ರಿವಳಿ ತಲಾಖ್ ಪದ್ಧತಿ ನಿಷೇಧ ಕಾಯ್ದೆಯ ಸೆಕ್ಷನ್ 4 ರಡಿ ದೂರು ದಾಖಲಿಸಿದ್ದಾರೆ.
ಇನ್ನು ಗೋವಾ ಮೂಲದ ಇಸ್ಮಾಯಿಲ್ ಖಾನ್, ಬೀಬಿ ಆಯೀಶಾ ಎನ್ನುವರನ್ನು ವಿವಾಹವಾಗಿದ್ದರು. ಮದುವೆ ಆಗಿ 10 ತಿಂಗಳು ಗೋವಾದಲ್ಲಿ ಜೊತೆಗಿದ್ದು, ಬಳಿಕ ನಿನಗೆ ಕಾಯಿಲೆ ಇದೆ. ತೋರಿಸಿಕೊಂಡು ಬಾ ಎಂದು ತವರು ಮನೆಗೆ ಕಳುಸಿದ್ದರು. ಇಲ್ಲಿನ ಎಲ್ಲಾ ಆಸ್ಪತ್ರಗೆ ತೋರಿಸಿದ್ದರೂ, ಆರೋಗ್ಯವಾಗಿದ್ದೇನೆಂದು ವೈದ್ಯರು ತಿಳಿಸಿದ್ದಾರೆ. ಆದರೂ ಪತಿ ನಿನಗೆ ಕಾಯಿಲೆ ಇದೆ ಎಂದು ವಿಚ್ಛೇದನ ನೀಡಿದ್ದಾರೆ ಎಂದು ಬೀಬಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.