ಕರ್ನಾಟಕ

karnataka

ETV Bharat / city

ಮತಾಂತರ ನಿಷೇಧ ವಿಧೇಯಕ ಮಂಡನೆ: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಬೊಮ್ಮಾಯಿ ಸರ್ಕಾರ!

ಮತಾಂತರ ನಿಷೇಧ ವಿಧೇಯಕದ ಮೂಲಕ ಸರ್ಕಾರ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಉರುಳಿಸಿದೆ. ಬಿಜೆಪಿ ಸರ್ಕಾರ ಒಂದು ವಿಧೇಯಕದ ಮೂಲಕ ತನ್ನ ಎರಡು ಉದ್ದೇಶವನ್ನು ಈಡೇರಿಸಿಕೊಂಡಿದೆ.

transmission ban bill
ಬೊಮ್ಮಾಯಿ ಸರ್ಕಾರ

By

Published : Dec 21, 2021, 10:53 PM IST

Updated : Dec 21, 2021, 10:59 PM IST

ಬೆಳಗಾವಿ:ಮತಾಂತರ ನಿಷೇಧ ವಿಧೇಯಕದ ಮೂಲಕ ಸರ್ಕಾರ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಉರುಳಿಸಿದೆ. ಬಿಜೆಪಿ ಸರ್ಕಾರ ಒಂದು ವಿಧೇಯಕದ ಮೂಲಕ ತನ್ನ ಎರಡು ಉದ್ದೇಶವನ್ನು ಈಡೇರಿಸಿಕೊಂಡಿದೆ.

ಪ್ರತಿಪಕ್ಷಗಳ ತೀವ್ರ ವಿರೋಧದ ಮಧ್ಯೆ ಸರ್ಕಾರ ವಿವಾದಾತ್ಮಕ ಮತಾಂತರ ನಿಷೇಧ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿದೆ. ಬಿಜೆಪಿ ಸರ್ಕಾರದ ಆಶಯದಂತೆ ಬಲವಂತದ ಮತಾಂತರಕ್ಕೆ ಕಡಿವಾಣ ಹಾಕಲು ವಿಧೇಯಕವನ್ನು ಮಂಡನೆ ಮಾಡಿದೆ. ವಿಧೇಯಕದಲ್ಲಿ ಅನೇಕ ಕಠಿಣ ಕಾನೂನುಗಳನ್ನು ಸೇರಿಸಿದೆ.

ಮತಾಂತರ ನಿಷೇಧ ವಿಧೇಯಕ ಮೂಲಕ ಬಿಜೆಪಿ ಸರ್ಕಾರ ತನ್ನ ಎರಡು ಉದ್ದೇಶಗಳನ್ನು ಈಡೇರಿಸಿದಂತಾಗಿದೆ. ಒಂದೇ ವಿಧೇಯಕದಲ್ಲಿ ಮತಾಂತರ ಹಾಗೂ ಲವ್ ಜಿಹಾದ್ ಎರಡಕ್ಕೂ ಕಡಿವಾಣ ಹಾಕಲು ಬಿಜೆಪಿ ಸರ್ಕಾರ ಯತ್ನಿಸಿದೆ. ಬಲವಂತದ ಮತಾಂತರ ನಿಷೇಧಿಸುವುದಾಗಿ ಬಿಜೆಪಿ ಆಗಾಗ ಹೇಳುತ್ತಲೇ ಬರುತ್ತಿದೆ. ‌ಅದರ ಜೊತೆಗೆ ಲವ್ ಜಿಹಾದ್‌ ಮೇಲೆನೂ ಬಿಜೆಪಿ ಕಣ್ಣಿಟ್ಟಿದೆ.‌ ಲವ್ ಜಿಹಾದ್ ವಿರುದ್ಧವೂ ಕಾನೂನು ತರುವುದು ಬಿಜೆಪಿಯ ಆಶಯವಾಗಿದೆ. ಈಗ ಒಂದೇ ವಿಧೇಯಕದ ಮೂಲಕ ತನ್ನ ಎರಡೂ ಆಶಯವನ್ನು ಈಡೇರಿಸಿದೆ.

ಒಂದು ಕಲ್ಲಿನಲ್ಲಿ ಎರಡು ಹಕ್ಕಿ

ಹೌದು, ಬಿಜೆಪಿ ಸರ್ಕಾರ ಒಂದು ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಉರುಳಿಸಲು ಹೊರಟಿದೆ. ವಿಧೇಯಕದ ಮೂಲಕ ಮತಾಂತರ ಹಾಗೂ ಲವ್ ಜಿಹಾದ್​ಗೆ ಕಡಿವಾಣ ಹಾಕಲು ಮುಂದಾಗಿದೆ. ವಿಧೇಯಕದಲ್ಲಿ ಬಲವಂತದ ಮತಾಂತರ ನಿಷೇಧಿಸುವುದರ ಜೊತೆಗೆ ಲವ್ ಜಿಹಾದ್ ಗೂ ಕಡಿವಾಣ ಹಾಕುವ ಕೆಲಸ ಮಾಡಿದೆ.

ಲವ್​ ಜಿಹಾದ್ ಅಂದರೆ ಒಂದು ಧರ್ಮದ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿ ಬಳಿಕ ಹುಡುಗನ ಧರ್ಮಕ್ಕೆ ಆಕೆಯನ್ನು ಮತಾಂತರ ಮಾಡುವುದು.‌ ರಾಜ್ಯದಲ್ಲಿ ಇಂಥ ಪ್ರಕರಣಗಳು ಹೆಚ್ಚಾಗಿವೆ ಎಂದು ಬಿಜೆಪಿ ಈ ಹಿಂದಿನಿಂದಲೂ ಆರೋಪ ಮಾಡುತ್ತಲೇ ಬರುತ್ತಿದೆ. ಲವ್ ಜಿಹಾದ್ ನಿಷೇಧಕ್ಕೆ ಹೊಸ ಕಾಯ್ದೆ ತರುತ್ತೇವೆ ಎಂದು ಬಿಜೆಪಿ ಸಚಿವರು ಹೇಳಿದ್ದರು. ಇದೀಗ ಮತಾಂತರ ನಿಷೇಧ ವಿಧೇಯಕದಲ್ಲೇ ಲವ್ ಜಿಹಾದ್ ಗೆ ಅಂಕುಶ ಹಾಕುವ ಅಂಶವನ್ನೂ ಸೇರಿಸಿದೆ.

ಇದನ್ನೂ ಓದಿ: ಮತಾಂತರ ಬಿಲ್​ ಮಂಡಿಸಿದ್ದೇವೆ, ತಾಕತ್ ಇದ್ರೆ ತಡೆಯಿರಿ: ರೇಣುಕಾಚಾರ್ಯ ಸವಾಲು

ಮತಾಂತರ ನಿಷೇಧ ವಿಧೇಯಕದಲ್ಲಿ ಒಂದು ಧರ್ಮದ ಪುರುಷನು ಮತ್ತೊಂದು ಧರ್ಮದ ಮಹಿಳೆಯೊಂದಿಗೆ ಮದುವೆಗೆ ಮುಂಚೆ ಅಥವಾ ನಂತರ ಆತನೇ ಮತಾಂತರಗೊಳ್ಳುವ ಮೂಲಕ ಅಥವಾ ಮದುವೆಗೆ ಮುಂಚೆ ಅಥವಾ ನಂತರ ಮಹಿಳೆಯನ್ನು ಮತಾಂತರಗೊಳಿಸುವ ಹಾಗಿಲ್ಲ. ಆ ರೀತಿಯಲ್ಲಿ ಮತಾಂತರಗೊಂಡರೆ ಆ ಮದುವೆಯನ್ನು ಅಸಿಂಧು ಎಂದು ಪರಿಗಣಿಸಲಾಗುತ್ತದೆ ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.

ಮತಾಂತರ ಮಾಡುವ ಏಕ ಮಾತ್ರ ಉದ್ದೇಶಕ್ಕಾಗಿ ಮಾಡಿದ ಯಾವುದೇ ಮದುವೆಯನ್ನು ಕೌಟುಂಬಿಕ ನ್ಯಾಯಾಲಯ ಅಸಿಂಧು ಎಂದು ಘೋಷಿಸಬೇಕು ಎಂದು ವಿಧೇಯಕದಲ್ಲಿ ಕಾನೂನು ರೂಪಿಸಲಾಗಿದೆ. ಆ ಮೂಲಕ ಲವ್ ಜಿಹಾದ್ ಮೇಲೆನೂ ಅಂಕುಶ ಹಾಕುವ ಕೆಲಸ ಮಾಡಿದೆ.

Last Updated : Dec 21, 2021, 10:59 PM IST

ABOUT THE AUTHOR

...view details