ಕರ್ನಾಟಕ

karnataka

ETV Bharat / city

ಮೃತ ಗುತ್ತಿಗೆದಾರ ಸಂತೋಷ್​ ಪಾಟೀಲ್​ ಕುಟುಂಬಸ್ಥರಿಂದ ತಿಥಿ ಕಾರ್ಯ - ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣ

ಇಂದು ತಿಥಿ ಹಿನ್ನೆಲೆಯಲ್ಲಿ ಮನೆಯಲ್ಲಿ ಸಂತೋಷ್​​​ ಫೋಟೊವಿಟ್ಟು ಕುಟುಂಬಸ್ಥರು ಪೂಜೆ ನೆರವೇರಿಸಿದ್ದಾರೆ. ಸಹೋದರ ಪ್ರಶಾಂತ್ ಅವರು ಸಂತೋಷ್​ ಫೋಟೋಗೆ ಪೂಜೆ ಸಲ್ಲಿಸಿದ್ದಾರೆ..

ಗುತ್ತಿಗೆದಾರ ಸಂತೋಷ್​ ಪಾಟೀಲ್​​ಗೆ ​ಕುಟುಂಬಸ್ಥರಿಂದ ತಿಥಿ ಕಾರ್ಯ
ಗುತ್ತಿಗೆದಾರ ಸಂತೋಷ್​ ಪಾಟೀಲ್​​ಗೆ ​ಕುಟುಂಬಸ್ಥರಿಂದ ತಿಥಿ ಕಾರ್ಯ

By

Published : Apr 15, 2022, 3:32 PM IST

Updated : Apr 15, 2022, 3:45 PM IST

ಬೆಳಗಾವಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​​ ‌ರಾಜ್ಯ ಇಲಾಖೆಯಿಂದ ಬಿಲ್ ಪಾವತಿಗೆ ವಿಳಂಬ ಮಾಡಿದಕ್ಕೆ ಸಚಿವ ಕೆ ಎಸ್ ಈಶ್ವರಪ್ಪ ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದ ಗುತ್ತಿಗೆದಾರ ಸಂತೋಷ್​ ಪಾಟೀಲ್​ ಅವರ ಕುಟುಂಬಸ್ಥರು ಇಂದು ತಿಥಿ ಕಾರ್ಯ ಪೂರೈಸಿದ್ದಾರೆ. ಬೆಳಗಾವಿ ತಾಲೂಕಿನ ‌ಬಡಸ್ ಗ್ರಾಮದಲ್ಲಿ ‌ಕುಟುಂಬಸ್ಥರು ತಿಥಿ ಕಾರ್ಯ ಮಾಡಿದ್ದಾರೆ.

ಮೃತ ಗುತ್ತಿಗೆದಾರ ಸಂತೋಷ್​ ಪಾಟೀಲ್​ ಕುಟುಂಬಸ್ಥರಿಂದ ತಿಥಿ ಕಾರ್ಯ

ಏಪ್ರಿಲ್ 11ರಂದು ರಾತ್ರಿ ಉಡುಪಿಯ ಶಾಂಭವಿ ಲಾಡ್ಜ್​​​ನಲ್ಲಿ ಸಂತೋಷ್​ ಪಾಟೀಲ್​​ ಆತ್ಮಹತ್ಯೆ ಮಾಡಿಕೊಂಡಿದ್ದರು. ನಿನ್ನೆ ಸಂತೋಷ್​ ಹುಟ್ಟೂರು ಬೆಳಗಾವಿ ತಾಲೂಕಿನ ಬಡಸ್‌ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಇಂದು ತಿಥಿ ಹಿನ್ನೆಲೆಯಲ್ಲಿ ಮನೆಯಲ್ಲಿ ಸಂತೋಷ್​​​ ಫೋಟೊವಿಟ್ಟು ಕುಟುಂಬಸ್ಥರು ಪೂಜೆ ನೆರವೇರಿಸಿದ್ದಾರೆ. ಸಹೋದರ ಪ್ರಶಾಂತ್ ಅವರು ಸಂತೋಷ್​ ಫೋಟೋಗೆ ಪೂಜೆ ಸಲ್ಲಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನತ್ತ ಈಶ್ವರಪ್ಪ ಪಯಣ: ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತರ ಕಣ್ಣೀರು

Last Updated : Apr 15, 2022, 3:45 PM IST

For All Latest Updates

TAGGED:

ABOUT THE AUTHOR

...view details