ಕರ್ನಾಟಕ

karnataka

ETV Bharat / city

ಬೆಳಗಾವಿ : ಪಿಸ್ತೂಲ್ ತೋರಿಸಿ ಬೆದರಿಸಿ 1.5 ಲಕ್ಷ ರೂ. ದೋಚಿದ ದುಷ್ಕರ್ಮಿಗಳು - ಪ್ಲಾಸ್ಟಿಕ್ ಕಾರ್ಖಾನೆಯ ಮಾಲೀಕನ ಮನೆಯಲ್ಲಿ ಕಳ್ಳತನ

ಪ್ರಾಣ ಭಯದಿಂದ ನಿರಂಜನ್ ಖಜಾನೆ ತೆರೆದು 1.5 ಲಕ್ಷ ರೂ. ನಗದನ್ನು ದುಷ್ಕರ್ಮಿಗಳಿಗೆ ನೀಡಿದ್ದಾರೆ. ಕೈಗೆ ಹಣ ಸೇರುತ್ತಿದ್ದಂತೆ ಮನೆಯಲ್ಲಿದ್ದ ಯಾರಿಗೂ ತೊಂದರೆ ಮಾಡದೆ ದರೋಡೆಕೋರರು ಪರಾರಿಯಾಗಿದ್ದಾರೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ಕಾಕತಿ ಪೊಲೀಸ್ ಠಾಣೆ
ಕಾಕತಿ ಪೊಲೀಸ್ ಠಾಣೆ

By

Published : Mar 30, 2022, 12:40 PM IST

ಬೆಳಗಾವಿ: ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಬೆಳಗಾವಿ ತಾಲೂಕಿನ ಹೊನಗಾ ಗ್ರಾಮದ ಮನೆಯೊಂದಕ್ಕೆ ನುಗ್ಗಿದ ಮೂವರು ದುಷ್ಕರ್ಮಿಗಳು ಮನೆಯಲ್ಲಿದ್ದವರಿಗೆ ಪಿಸ್ತೂಲ್ ತೋರಿಸಿ, ಬೆದರಿಸಿ 1.5 ಲಕ್ಷ ರೂ. ದೋಚಿಕೊಂಡು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಹೊನಗಾ ಗ್ರಾಮದ ಪುಣೆ-ಬೆಂಗಳೂರು ‌ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಪ್ರವೀಣ ನಿರಂಜನ್ ಎಂಬುವರ ಮನೆಯಲ್ಲಿ ದರೋಡೆ ನಡೆದಿದೆ.

ಪ್ರವೀಣ ಪ್ಲಾಸ್ಟಿಕ್ ಕಾರ್ಖಾನೆಯ ಮಾಲೀಕರಾಗಿದ್ದಾರೆ. ಗ್ರೌಂಡ್ ಫ್ಲೋರ್​‌ನಲ್ಲಿ ಕಾರ್ಖಾನೆ ಇದ್ದು, ಮೊದಲ ಮಹಡಿಯಲ್ಲಿ ಇವರು​ ಕುಟುಂಬ ಸಮೇತರಾಗಿ ವಾಸವಾಗಿದ್ದಾರೆ. ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಬಂದ ಮೂವರು ದರೋಡೆಕೋರರ ತಂಡ ಮನೆಗೆ ನುಗ್ಗಿ, ಪಿಸ್ತೂಲ್, ಕುಡುಗೋಲು ಹಿಡಿದುಕೊಂಡು ಬೆದರಿಸಿ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ನೀಡುವಂತೆ ಕುಟುಂಬಸ್ಥರಿಗೆ ಬೆದರಿಸಿದ್ದಾರೆ.

ಪ್ರಾಣ ಭಯದಿಂದ ನಿರಂಜನ್ ಖಜಾನೆ ತೆರೆದು 1.5 ಲಕ್ಷ ರೂ. ನಗದನ್ನು ದುಷ್ಕರ್ಮಿಗಳಿಗೆ ನೀಡಿದ್ದಾರೆ. ಕೈಗೆ ಹಣ ಸೇರುತ್ತಿದ್ದಂತೆ ಮನೆಯಲ್ಲಿದ್ದ ಯಾರಿಗೂ ತೊಂದರೆ ಮಾಡದೆ ದರೋಡೆಕೋರರು ಪರಾರಿಯಾಗಿದ್ದಾರೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಅತ್ತೆ,ಪತ್ನಿ,ಇಬ್ಬರು ಮಕ್ಕಳ ಕೊಂದು ಆರೋಪಿ ಪರಾರಿ.. ದುರ್ವಾಸನೆ ಮೂಲಕ ಬೆಳಕಿಗೆ ಬಂದ ಮರ್ಡರ್​ ಕೇಸ್​!

ABOUT THE AUTHOR

...view details