ಕರ್ನಾಟಕ

karnataka

ETV Bharat / city

ಬೆಳಗಾವಿ: ಮೂವರು ನಕಲಿ ACB ಅಧಿಕಾರಿಗಳ ಬಂಧನ - ಬೆಳಗಾವಿ

ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಮೂವರು ನಕಲಿ ಎಸಿಬಿ ಅಧಿಕಾರಿಗಳನ್ನ ಬೆಳಗಾವಿ ಸೈಬರ್ ಠಾಣೆಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Three fake ACB officers arrested in Belagavi
ಬಂಧಿತ ಆರೋಪಿಗಳು

By

Published : Jun 17, 2022, 8:54 AM IST

ಬೆಳಗಾವಿ: ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಮೂವರು ನಕಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳನ್ನ ಬೆಳಗಾವಿ ಸೈಬರ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಚಿಕ್ಕೋಡಿಯ ಸದಲಗಾ ಪಟ್ಟಣದ ಮುರುಗೆಪ್ಪ ಪೂಜಾರ(56), ಬಸ್ತವಾಡ ಗ್ರಾಮದ ರಾಜೇಶ್ ಚೌಗುಲೆ ಹಾಗೂ ಹಾಸನದ ಸಕಲೇಶಪುರ ಮೂಲದ ರಜನೀಕಾಂತ್ ಬಂಧಿತರು‌.

ಇವರು, ಆರ್​ಟಿಒ, ಸಬ್‍ರಿಜಿಸ್ಟಾರ್, ಕಂದಾಯ ಸೇರಿದಂತೆ ಇತರ ಇಲಾಖೆ ಅಧಿಕಾರಿಗಳಿಗೆ ಎಸಿಬಿ ಅಧಿಕಾರಿಗಳು ಎಂದು ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದರು. ಸರ್ಕಾರಿ ಇಲಾಖೆಯ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಖದೀಮರು ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತಮ್ಮ ಖಾತೆಗ ಹಣ ವರ್ಗಾವಣೆ ಮಾಡದಿದ್ದರೆ ಕಚೇರಿಯ ಕಡತಗಳನ್ನು ಪರಿಶೀಲನೆ ಮಾಡುವ ಬೆದರಿಕೆ ಹಾಕುತ್ತಿದ್ದರಂತೆ.

ಈ ಕುರಿತು ಬೆಳಗಾವಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಕಲಿ ಎಸಿಬಿ ಖದೀಮರ ಜಾಲವನ್ನು ಬೇಧಿಸಿದ್ದಾರೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯ ಸಿಪಿಐ ಗಡ್ಡೇಕರ್ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು.

ಇದನ್ನೂ ಓದಿ:ಪ್ರಯಾಣಿಕನ ಬ್ಯಾಗ್​ನಲ್ಲಿ ಜೀವಂತ ಗುಂಡು ಪತ್ತೆ.. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಮೆರಿಕ ಪ್ರಜೆಯ ಬಂಧನ

ABOUT THE AUTHOR

...view details